ಬಂಟ್ವಾಳ: ಶನಿವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ವ್ಯಾಪಕ ಹಾನಿ ಬಂಟ್ವಾಳ ತಾಲೂಕಿನಲ್ಲಿ ಸಂಭವಿಸಿದೆ.ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಯುನೂಸ್ ಎಂಬುವವರ ಮನೆಗೆ ಬೆಳಗ್ಗಿನ ಜಾವದಲ್ಲಿ ಬೀಸಿದ ಗಾಳಿ-ಮಳೆಗೆ ಮರ ಬಿದ್ದು ಭಾಗಶಃ ಹಾನಿ ಆಗಿರುತ್ತದೆ. ಇದೇ ಊರಿನಲ್ಲಿ ಅಬ್ದುಲ್ ಖಾದರ್ ಎಂಬುವವರ ಮನೆ ಗಾಳಿ-ಮಳೆಗೆ ಭಾಗಶಃ ಹಾನಿ ಆಗಿರುತ್ತದೆ. ಶನಿವಾರ ಬೆಳಗ್ಗಿನ ಹೊತ್ತು ಬೀಸಿದ ಬಿರುಗಾಳಿಯ ಪರಿಣಾಮ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿಯ ಶೀಟ್ ಗಳು ಹಾರಿ ಹೋದ ಘಟನೆ ನಡೆದಿದೆ. ಬೆಳಗ್ಗೆ ಸುಮಾರು 9.30 ರ ಹೊತ್ತಿಗೆ ಜೋರಾದ ಗಾಳಿ ಬೀಸಿದ್ದು, ಖಾದರ್ ಇಕ್ರಾ ಅವರಿಗೆ ಸೇರಿದ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಅಳವಡಿಸಿರುವ ಶೀಟ್ ಗಳು ಹಾರಿ ಹೋಗಿದ್ದು, ಅದರ ವಿಡಿಯೋ ದೃಶ್ಯಗಳು ಸೆರೆಯಾಗಿವೆ. ಘಟನೆಯಲ್ಲಿ ಯಾವುದೇ ರೀತಿಯ ಜೀವ ಹಾನಿ ಉಂಟಾಗಿಲ್ಲ.ವೀರಕಂಭ ಗ್ರಾಮದ ಬಾಯಿಲ ಎಂಬಲ್ಲಿ ಕಲ್ಯಾಣಿ ರವರ ಮನೆ ಗೋಡೆ ಕುಸಿದು ಬಿದ್ದು ಹಾನಿಯಾಗಿರುತ್ತದೆ.ಕುರಿಯಾಳ ಗ್ರಾಮದ ಕುರಿಯಾಳ ಪಡು ಎಂಬಲ್ಲಿ ಉಗ್ಗಪ್ಪ ಪೂಜಾರಿ ಎಂಬವರ ಮನೆಯ ಪಕ್ಕದ ಕೊಟ್ಟಿಗೆ ಹಾನಿಯಾಗಿದೆ. ಪೆರ್ನೆಯ ಸೀತಾ ನಾಯ್ಕ, ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಗಿರುತ್ತದೆ. ಕೊಳ್ನಾಡು ಗ್ರಾಮದ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ರವರ ಮನೆಗೆ ಮರ ಬಿದ್ದು ಭಾಗಶ: ಹಾನಿಯಾಗಿರುತ್ತದೆ. ಇರ್ವತ್ತೂರು ಗ್ರಾಮದ ನವೀನ್ ಮೂಲ್ಯ ಎಂಬುವರ ದನದ ಹಟ್ಟಿಗೆ ಹಾನಿ ಆಗಿರುತ್ತದೆ