ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಶ್ರೀನಿವಾಸ್‌ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸಯನ್ಸ್‌ಅಂಡ್ ಇನ್ಫಾರ್ಮೇಶನ್ ಸಯನ್ಸಸ್ ಕಾಲೇಜಿನಡಿಯಲ್ಲಿ ಟೆಕ್ ಹೊರೈಜಾನ್2024 ಒಂದು ದಿನದ ರಾಷ್ಟ್ರೀಯ ಸಮ್ಮೇಳನ ನಡೆಯಿತು.
ಮಾಹೆ ಎಂಐಟಿಯ ಪ್ರಾಧ್ಯಾಪಕಿ ಡಾ. ಪೂರ್ಣಲತಾ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸಂಶೋಧನೆ ಕೆಲಸಗಳು ನಡೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸಯನ್ಸ್‌ಅಂಡ್ ಇನ್ಫಾರ್ಮೇಶನ್ ಸಯನ್ಸಸ್‌ಪ್ರೊಫೆಸರ್ ಮತ್ತು ಡೀನ್ ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಕಂಪ್ಯೂಟರ್ ಸಯನ್ಸ್‌ಅಂಡ್ ಇನ್ಫಾರ್ಮೇಶನ್ ಸಯನ್ಸಸ್ ವಿಭಾಗದ ಸಂಶೋಧನೆಗಳು ಸಾಗಿ ಬಂದ ಹಾದಿಯನ್ನು ವಿವರಿಸಿದರು. ಸಂಶೋಧನೆಗಳು ಅಂತ್ಯದಲ್ಲಿ ಸಮಾಜಕ್ಕೆ ಪೂರಕವಾಗಲಿ. ಕೃತಕ ಬುದ್ಧಿಮತ್ತೆ ಬಳಸಿ ಸಂಶೋಧನೆ ಮಾಡುವ ವರ್ಗ ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಹೇಳಿದರು.
ದೇಶದ ವಿವಿಧ ಕಡೆಗಳಿಂದ ಒಟ್ಟು 61 ಸಂಶೋಧನಾ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡಿಸಲ್ಪಟ್ಟವು. ಸಮ್ಮೇಳನದ ಸಂಚಾಲಕರಾದ ಡಾ.ಸೌಮ್ಯಎಸ್. ಉಪಸ್ಥಿತರಿದ್ದರು. ಶ್ರೀನಿವಾಸ ವಿಶ್ವವಿದ್ಯಾಲಯದ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್‌ಕಂಪ್ಯೂಟರ್ ಸಯನ್ಸ್ ಅಂಡ್ ಇನ್ಫಾರ್ಮೇಶನ್ ಸಯನ್ಸಸ್‌ನ ಮುಖ್ಯಸ್ಥರಾದ ಡಾ.ಶ್ರೀಧರ ಆಚಾರ್ಯ ಸಮ್ಮೇಳನದ ಅತಿಥಿಗಳಿಗೆ ಸ್ವಾಗತ ಕೋರಿದರು. ಎಂ.ಸಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ.ಸ್ವಾತಿ ಸುರೇಶ್ ವಂದನಾರ್ಪಣೆಗೈದರು. ಅಧ್ಯಾಪಕರಾದ ಪ್ರೊ.ರಿಯಾ ಮತ್ತುತಂಡ ಕಾರ್ಯಕ್ರಮ ನಿರೂಪಿಸಿದರು.