ಬಂಟ್ವಾಳ

ರೋಟರಿ ಬಂಟ್ವಾಳ ಬ್ಲಡ್ ಸೆಂಟರ್ ಜೂನ್ 29ರಂದು ಉದ್ಘಾಟನೆ, ವಿವರಗಳು ಇಲ್ಲಿವೆ

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಬಾಳಿಗಾ ಮಾಹಿತಿ ನೀಡಿದರು.

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ರೋಟರಿ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಅನ್ವಯ ರೋಟರಿ ಬಂಟ್ವಾಳ ಬ್ಲಡ್ ಸೆಂಟರ್ ಅನ್ನು ರೈಲ್ವೆ ನಿಲ್ದಾಣದ ಬಳಿ ಇರುವ ರೋಟರಿ ಭವನದಲ್ಲಿ ಉದ್ಘಾಟಿಸಲಾಗುವುದು. ರೋಟರಿ ಜಿಲ್ಲೆಯ ಗವರ್ನರ್ ಎಚ್.ಆರ್. ಕೇಶವ್ ಉದ್ಘಾಟಿಸುವರು ಎಂದು ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಬಾಳಿಗಾ ಹೇಳಿದ್ದಾರೆ..
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ವೇದಮೂರ್ತಿ ಜನಾರ್ದನ ವಾಸುದೇವ ಭಟ್ ಅವರು ಆಶೀರ್ಚನ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಭಾರತ್ ಬೀಡಿಯ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಾಯ ಎಂ. ಪೈ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಜಿಲ್ಲಾ ಮಾಜಿ ಗವರ್ನರ್ ಗಳಾದ ಎನ್. ಪ್ರಕಾಶ್ ಕಾರಂತ್, ಎ.ಆರ್.ಆರ್.ಎಫ್.ಸಿ ಕೆ. ಕೃಷ್ಣ ಶೆಟ್ಟಿ, ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಮದತ್ತ, ನಾಮನಿರ್ದೇಶಿತ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ, ಸತೀಶ್ ಪೋಳಾರ್, ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸಾಲ್ವಿಸ್, ಡಿ.ಆರ್.ಎಫ್.ಸಿ. ಡಾ. ಸೂರ್ಯನಾರಾಯಣ ಹಾಗೂ ಜೋನಲ್ ಲೆಫ್ಟಿನೆಂಟ್ ರವೀಂದ್ರ ದರ್ಬೆ ಭಾಗವಹಿಸಲಿರುವರು. ರೋಟರಿ ಬಂಟ್ವಾಳದ ಬ್ಲಡ್ ಸೆಂಟರ್ ನ ಚೇರ್ಮನ್ ಆಗಿ ಮಂಜುನಾಥ ಆಚಾರ್ಯ, ಕಾರ್ಯದರ್ಶಿಯಾಗಿ ಬಸ್ತಿ ಮಾಧವ ಶೆಣೈ ಕಾರ್ಯನಿರ್ವಹಿಸಲಿದ್ದು, ರೋಟರಿ ಬಂಟ್ವಾಳ ಚಾರಿಟೇಬಲ್ ಟ್ರಸ್ಟ್ ಚೇರ್ಮನ್ ಆಗಿ ಐತಪ್ಪ ಆಳ್ವ ಮತ್ತು ಕಾರ್ಯದರ್ಶಿಯಾಗಿ ಮುರಳೀಧರ ಪ್ರಭು ಕಾರ್ಯನಿರ್ವಹಿಸುತ್ತಿದ್ದಾರೆ ಎಂದವರು ಮಾಹಿತಿ ನೀಡಿದರು.
ಸುಮಾರು 85 ಲಕ್ಷ ರೂ ವೆಚ್ಚದಲ್ಲಿ ಈ ಬ್ಲಡ್ ಸೆಂಟರ್ ನಿರ್ಮಾಣವಾಗಿದ್ದು, ಇದಕ್ಕೆ 56.43 ಲಕ್ಷ ರೂ ರೋಟರಿಯ ಅಂತಾರಾಷ್ಟ್ರೀಯ ಗ್ಲೋಬಲ್ ಗ್ರಾಂಟ್ ಮೂಲಕ ದೊರಕಿದೆ. ಇದಕ್ಕೆ ಅಲ್ಲಿಯ ನಿವಾಸಿ ಹಾಗೂ ಕರಾವಳಿಯ ಮೂಲದ ವಿನಾಯಕ್ ಕುಡ್ವ ಅವರು ಸಹಕಾರ ನೀಡಿದ್ದಾರೆ. ಗ್ಲೋಬಲ್ ಗ್ರಾಂಟ್ ನಲ್ಲಿ ಅರ್ಜಿ ಸಲ್ಲಿಸಿ ಸಹಯೋಗಿಯಾಗಿ ನ್ಯೂ ತಂಪಾನೂನ್ ಕ್ಲಬ್ ಸಹಕಾರದೊಂದಿಗೆ ಬ್ದಡ್ ಸೆಂಟರ್ ಸ್ಥಾಪಿಸಲು 2022-23ರಲ್ಲಿ ಪುಷ್ಪರಾಜ ಹೆಗ್ಡೆ ಅಧ್ಯಕ್ಷರಾಗಿ ಭಾನುಶಂಕರ ಬನ್ನಿಂತಾಯ ಕಾರ್ಯದರ್ಶಿಯಾಗಿರುವಾಗ ಕಾರ್ಯಪ್ರವೃತ್ತರಾಗಿದ್ದೆವು. 2014ರಿಂದಲೇ ಪ್ರಕಾಶ್ ಕಾರಂತ ಅವರ ಅಧ್ಯಕ್ಷೀಯ ಅವಧಿಯಲ್ಲಿ ಈ ಯೋಜನೆ ನಡೆದಿತ್ತು. ಅವರು ಜಿಲ್ಲಾ ಗವರ್ನರ್ ಆದ ಮೇಲೆ ಇದಕ್ಕೆ ಮತ್ತಷ್ಟು ಪುಷ್ಠಿ ದೊರಕಿತು. ಬಳಿಕ ಇದಕ್ಕಾಗಿ ಕಮಿಟಿ ರಚನೆ ಮಾಡಿ ಕ್ಲಬ್ ನ ಇತರ ಸದಸ್ಯರ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತರಲಾಯಿತು ಎಂದು ಪ್ರಕಾಶ್ ಬಾಳಿಗಾ ಹೇಳಿದರು. ಭಾರತ್ ಬೀಡಿ ಸಂಸ್ಥೆಯವರು ಯೋಜನೆ ಜಾರಿಗೆ ಸಹಕಾರ ನೀಡಿದ್ದಾರೆ ಎಂದವರು ಹೇಳಿದರು. ಈ ಸಂದರ್ಭ ಕ್ಲಬ್ ಕಾರ್ಯದರ್ಶಿ ಸದಾಶಿವ ಬಾಳಿಗಾ ಪೂರಕ ಮಾಹಿತಿ ನೀಡಿದರು. ಪೂರ್ವಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಮುರಳೀದರ ಪ್ರಭು, ಬ್ಲಡ್ ಬ್ಯಾಂಕ್ ಉಸ್ತುವಾರಿ ವೈದ್ಯರಾಗಿರುವ ಡಾ. ಆತ್ಮರಂಜನ್ ರೈ, ಪ್ರಮುಖರಾದ ನಾರಾಯಣ ಹೆಗ್ಡೆ ಈ ಸಂದರ್ಭ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ