ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆ, ಬುಧವಾರ ಬೆಳಗ್ಗೆ ಬಿರುಸಾಗಿದ್ದು, ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದೆ. ಈಗಾಗಲೇ ಕಲ್ಲಡ್ಕ, ತುಂಬೆಯಲ್ಲಿ ರಸ್ತೆಯ ತುಂಬಾ ನೀರು ಹರಿಯುತ್ತಿದ್ದರೆ, ಮೆಲ್ಕಾರ್, ಬಿ.ಸಿ.ರೋಡ್ ಜಂಕ್ಷನ್ ಸಹಿತ ಹಲವು ಪ್ರದೇಶಗಳಲ್ಲಿ ನಡೆಯಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ, ಕಾಲೇಜುಗಳಿಗೆ ರಜೆಯೂ ಇಲ್ಲದ ಕಾರಣ, ಬೆಳಗ್ಗೆ ಮಕ್ಕಳು ಶಾಲೆಗೆ ಧಾರಾಕಾರ ಸುರಿಯುತ್ತಿರುವ ಮಳೆಯಲ್ಲೇ ಬಸ್ ಹತ್ತಬೇಕಾಯಿತು. ನಡೆದುಕೊಂಡು ರಸ್ತೆಯಲ್ಲಿ ಹೋಗಲೂ ಅಸಾಧ್ಯವಾದ ಪರಿಸ್ಥಿತಿ ಇದ್ದ ಕಾರಣ, ಶಾಲೆ, ಕಾಲೇಜು, ಕಚೇರಿಗಳಿಗೆ ಆಗಮಿಸುವವರು ತೊಂದರೆಗೆ ಒಳಗಾದರು. ಇನ್ನು, ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳು ಸಂಭವಿಸಿದ್ದು, ಅವುಗಳ ವಿವರ ಹೀಗಿದೆ.
ಕೆದಿಲ ಗ್ರಾಮದ ಗಾಂದಿ ನಗರ ಪೂವಕ್ಕ ರವರ ವಾಸ್ತವ್ಯ ದ ಮನೆ ಮೇಲೆ ಮರ ಬಿದ್ದು ಹಾನಿ ಆಗಿದೆ,
ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ರಾಮಚಂದ್ರ ಗೌಡ ಎಂಬವರ ಮನೆ ಬದಿ ಮಣ್ಣು ಜರಿದು ಶೌಚಾಲಯದ ಪಿಟ್ ಗುಂಡಿ ಜರಿದು ಬಿದ್ದಿರುತ್ತದೆ.
ಪುದು ಗ್ರಾಮದ ಕೆಸನಮೊಗರು ಎಂಬಲ್ಲಿಯ ಬಾಬು ಸಪಲ್ಯ ಬಿನ್ ಸುಬ್ಬಪ್ಪ ರವರ ಮನೆ ಮೇಲೆ ಮರಬಿದ್ದು ಗೋಡೆ ಹಾಗೂ ಹಂಚು ಹಾನಿಯಾಗಿರುತ್ತ ದೆ. ಯಾವುದೇ ಜೀವ ಹಾನಿ ಯಾಗಿಲ್ಲ.
ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ಭತ್ತದ ಗದ್ದೆಯಲ್ಲಿ ಮಳೆ ನೀರು ನಿಂತಿದೆ.
ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿ ಯವರ ವಾಸ್ತವ್ಯದ ಮನೆ ಮೇಲೆ ಅಶ್ವಥ ಮರ ಬಿದ್ದು ಭಾಗಶಃ ಹಾನಿ ಹಾಗು ಕಾಂಪೌಂಡ್ ಹಾನಿಯಾಗಿದೆ.
ನೆಟ್ಲದ ನಿಟಿಲೇಶ್ವರ ದೇವಸ್ಥಾನದ ಬಳಿ ಮರ ಬಿದ್ದು, ಕಂಪೌಂಡ್ ಗೆ ಹಾನಿಯಾಗಿದೆ.
Harish Mambady2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ