ದಮ್ಮಾಮ್, ಜುಬೈಲ್, ಖೋಬರ್ ನ ಚಿಕನ್ ಪಿಕ್ನಿಕ್ ರೆಸ್ಟೊರೆಂಟ್ ನಲ್ಲಿ ಮ್ಯಾನೇಜರ್ ಆಗಿ ಉತ್ತಮ ಸೇವೆ ಸಲ್ಲಿಸಿದ ಮೊಹಮ್ಮದ್ ಫೈಝಲ್ ಅವರಿಗೆ ಶುಭ ವಿದಾಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಅವರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಯಿತು.
ಅಂತಾರಾಷ್ಟ್ರೀಯ ಶಾಖೆಗಳನ್ನು ಹೊಂದಿರುವ ಯುಎಸ್ ಶೇಜಾ ಗ್ರೂಪ್ ಮತ್ತು ಚಿಕನ್ ಪಿಕ್ನಿಕ್ ರೆಸ್ಟೊರೆಂಟ್ ಖೋಬರ್, ದಮ್ಮಾಮ್, ಜುಬೈಲ್ ಪರವಾಗಿ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಿ ಚೆಕ್ ಅನ್ನು ನೀಡಲಾಯಿತು. ಮತ್ತು ಅವರ ಉನ್ನತ ಮಟ್ಟದ ನಿರ್ವಹಣೆಗಾಗಿ ಮೊಹಮ್ಮದ್ ಫೈಜಲ್ ಅವರಿಗೆ ವಿದಾಯ ಕೂಟವನ್ನು ಆಯೋಜಿಸಲಾಯಿತು.
ಕಳೆದ ಒಂದೂವರೆ ವರ್ಷಗಳಿಂದ ಅಂತರಾಷ್ಟ್ರೀಯ ರೆಸ್ಟೊರೆಂಟ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಲಾಯಿತು. ಈ ಸಂದರ್ಭ ಸಿಇಒ ಅಮೀರುದ್ದೀನ್, ಮಾಲಕ ಜಮಾಲುದ್ದೀನ್, ಮೊಹಮ್ಮದ್ ಅನ್ಸಾರ್, ಶಫೀಕ್ ಎನ್ ಎಸ್ ಯು ಐ, ಮಝೂಕ್, ಅಶ್ಫಾಕ್, ಆಲಂ ಉಪಸ್ಥಿತರಿದ್ದರು. ಮತ್ತು ಸಲಾವುದ್ದೀನ್ ತೊಕ್ಕೊಟ್ಟು ಶುಭ ಹಾರೈಸಿದರು.