ಪೆಟ್ರೋಲ್ ಡಿಸೇಲ್ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ಬಂಟ್ವಾಳ ಘಟಕದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಗುರುವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ, ಹೆದ್ದಾರಿ ತಡೆ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಈಗ ನಾಲ್ಕನೇ ಸ್ಥಾನಕ್ಕೆ ಹಿಂದೆ ಸರಿದಿದೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ನೆಪದಲ್ಲಿ ಹಣವನ್ನು ಡೈವರ್ಟ್ ಮಾಡುತ್ತಿದ್ದು ಈ ಹಣ ಎಲ್ಲಿ ಹೋಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಭಿವೃದ್ದಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಬಿಟ್ಟಿ ಭಾಗ್ಯ ಕಾಂಗ್ರೆಸ್ ನಿಂದ ಹುಟ್ಟಿದ ತಳಿ. ಬಿಟ್ಟಿ ಭಾಗ್ಯದಿಂದ ಗರೀಭೀ ಹಠಾವೂ ಆಗಿಲ್ಲ ಗರೀಭಿ ಬಚಾವೋ ಆಗಿದೆ ಎಂದರು ಬಿಜೆಪಿ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಸುಲೋಚನಾ ಭಟ್, ಪೂಜಾ ಪೈ, ರಾಮದಾಸ ಬಂಟ್ವಾಳ, ವಿಕಾಸ್ ಪುತ್ತೂರು, ದೇವಪ್ಪ ಪೂಜಾರಿ, ಸಂದೇಶ ಶೆಟ್ಟಿ ಅರೆಬೆಟ್ಟು, ದೇವದಾಸ ಶೆಟ್ಟಿ, ಮಾಧವ ಮಾವೆ, ಪ್ರೇಮಾನಂದ ಶೆಟ್ಟಿ, ರವೀಶ್ ಶೆಟ್ಟಿ ಕರ್ಕಳ, ಡೊಂಬಯ ಅರಳ, ಎ. ಗೋವಿಂದ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು, ಸುರೇಶ್ ಕೋಟ್ಯಾನ್, ಪುರುಷೋತ್ತಮ ಸಾಲ್ಯಾನ್ ಶಂಭೂರು, ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಪ್ರಭಾಕರ ಪ್ರಭು, ಪ್ರಕಾಶ ಅಂಚನ್, ಕೇಶವ ದೈಪಲ, ಆನಂದ ಶಂಭೂರು, ವಿದ್ಯಾವತಿ ಪ್ರಮೋದ್ ಕುಮಾರ್, ಹರ್ಷಿಣಿ ಪುಷ್ಪಾನಂದ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಶ್ರೀದರ್ ಶೆಟ್ಟಿ ಪುಳಿಂಚ ,ಯಶೋಧರ ಕರ್ಬೆಟ್ಟು, ಚೈತ್ಯನ್ಯ ಗಣೇಶ್ ದಾಸ್, ಜಯಂತಿ, ಹರಿಪ್ರಸಾದ್, ದಿನೇಶ್ ಭಂಡಾರಿ, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಸತೀಶ್ ಪೂಜಾರಿ, ಮೋನಪ್ಪ ದೇವಸ್ಯ, ರತ್ನಾಕರ್ ಚೌಟ, ತನಿಯಪ್ಪ ಗೌಡ, ರೊನಾಲ್ಡ್ ಡಿಸೋಜ ಬಂಟ್ವಾಳ, ಕಾರ್ತಿಕ್ ಬಲ್ಲಾಳ್, ಅಜಿತ್ ಶೆಟ್ಟಿ, ಕಿಶೋರ್ ಪಲ್ಲಿಪಾಡಿ ಸಂತೋಷ್ ರಾಯಿಬೆಟ್ಟು, ಸಂಜೀವ ಪೂಜಾರಿ ಪಂಜಿಕಲ್ಲು, ವಿಜಯ್ ಅಮ್ಟಾಡಿ, ಸುನಿಲ್ ಕಾಯರ್ ಮಾರ್, ಶುಭಕರ ಶೆಟ್ಟಿ, ಬಾಸ್ಕರ್ ಟೈಲರ್ ಕಾಮಾಜೆ ಮತ್ತಿತರರು ಭಾಗವಹಿಸಿದ್ದರು.