ಉಳ್ಳಾಲ ತಾಲೂಕಿನ ಕುರ್ನಾಡು ಶ್ರೀ ದತ್ತಾತ್ರೇಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿಟ್ಲ,ಪ್ರಗತಿ ಬಂಧು ಸ್ವ ಸಹಾಯ ಬಂದುಗಳ ಒಕ್ಕೂಟ,ಗ್ರಾಮ ಪಂಚಾಯತ್ ಕುರ್ನಾಡು ಇವರ ಸಹಯೋಗದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಪಂಚಾಯತ್ ಅದ್ಯಕ್ಷೆ ಶ್ರೀಮತಿ ಲೋಲಾಕ್ಷಿ ಅವರು ಉದ್ಘಾಟಿಸಿದರು,ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಕ್ಷೇತ್ರದ ಶ್ರೀ ಚಿದಾನಂದ ಇವರು ಪರಿಸರದ ಕುರಿತಾದ ಮಾಹಿತಿ ನೀಡಿದರು.
ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಕ್ಕಳಿಗೆ ಅತಿಥಿಗಳು ಸಸಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅದ್ಯಕ್ಷರಾದ ಮತ್ತು ಪಂಚಾಯತ್ ಸದಸ್ಯರಾದ ಶ್ರೀ ಗಣೇಶ್ ನಾಯಕ್ ಕುರ್ನಾಡುಗುತ್ತು, ಶಾಲಾ ಮುಖ್ಯೋಪಾದ್ಯಾಯಿನಿ ವಸಂತಿ,ಶಿಕ್ಷಕ,ಶಿಕ್ಷಕಿಯರು,ಸ್ಥಳೀಯರಾದ ಶ್ರೀ ನವೀನ್ ಚಂದ್ರ,ರವೀಂದ್ರ ಕುಲಾಲ್ ರಾಜೇಶ್,ಬಾಸ್ಕರ ಬೆಳ್ಚಾಡ,ಮಮತ,ಶಿವಕುಮಾರ್,ಕವಿತಾ,ಶಕೀಲಾ ಹಾಗೂ ಇತರರು ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿ,ಸವಿತಾ ಭಟ್ ವಂದಿಸಿದರು,ಶಕೀಲಾ ಕಾರ್ಯಕ್ರಮ ನಿರೂಪಿಸಿದರು.