ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಚಿಕ್ಕಮೇಳಕ್ಕೆ ಗೆಜ್ಜೆಪೂಜೆಯೊಂದಿಗೆ ಸೋಮವಾರ ಪ್ರಥಮ ಸೇವೆ ಆಟದೊಂದಿಗೆ ಚಾಲನೆ ನೀಡಲಾಯಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಉದಯಭಟ್. ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್. ನಂದಾವರ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಅರುಣ್ ಕುಮಾರ್ ಕೆ,. ಮೋಹನ ದಾಸ್ ಹೆಗ್ಡೆ ಕೆ,. ಮ್ಯಾನೇಜರ್ ರಾಮಕೃಷ್ಣ, ರಮೇಶ್ ಕುಮಾರ್, ಸೋಮನಾಥ ಚಿಕ್ಕಮೇಳದ ಸಂಚಾಲಕ ಭಾಸ್ಕರ್ ಸರಪಾಡಿ, ಕಲಾವಿದರಾದ ಶಿವಪ್ರಸಾದ್ ಕಾವಳಕಟ್ಟೆ. ಕಾರ್ತಿಕ್ ಸರಪಾಡಿ. ಸಂದೀಪ ಕುಲಾಲ್. ಶಿವಪ್ರಸಾದ್ ಕುರಾಯ. ಶಿವಪ್ರಸಾದ್ ಆಚಾರ್ಯ. ಧನಂಜಯ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು.