ಜೂನ್ 3ರಂದು ನಡೆಯಲಿರುವ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ದ.ಕ ಜಿಲ್ಲೆಯ ಪ್ರಜ್ಞಾವಂತ ಪದವೀಧರ ಮತ್ತು ಶಿಕ್ಷಕ ಮತದಾರರು ಬಿಜೆಪಿ ಬೆಂಬಲಿತ , ಸರ್ವಸಮ್ಮತ ಅಭ್ಯರ್ಥಿಯಾದ ಡಾ ಧನಂಜಯ ಸರ್ಜೆಯವರನ್ನು ಪಧವೀಧರ ಕ್ಷೇತ್ರಕ್ಕೂ, ಎನ್ ಡಿ ಎ ಬೆಂಬಲಿತ , ಅನುಭವಿ ರಾಜಕಾರಣಿಯಾಗಿರುವ ಎಸ್ ಎಲ್ ಭೋಜೆ ಗೌಡರಿಗೆ ಶಿಕ್ಷಕ ಮತದಾರರು ತಮ್ಮ ಮೊದಲ ಪ್ರಾಶ್ಯಸ್ತದ ಮತವನ್ನು ನೀಡುವ ಮೂಲಕ ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕೆಂದು ಪದವೀಧರ ಮತ್ತು ಶಿಕ್ಷಕ ಮತದಾರರಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆಯ ಮೂಲಕ ವಿನಂತಿ ಮಾಡಿದ್ದಾರೆ.
“ಬುದ್ದಿವಂತರ ಚಾವಡಿ” (ಮೇಲ್ಮನೆ) ಎಂದೇ ಪ್ರಸಿದ್ದಿಯಾಗಿರುವ ಕರ್ನಾಟಕ ವಿಧಾನ ಪರಿಷತ್ತ್ ಗೆ ಪಧವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಡಾ ಧನಂಜಯ ಸರ್ಜೆಯವರು ಯೋಗ್ಯ ಅಭ್ಯರ್ಥಿಯಾಗಿದ್ದು , ವೈದ್ಯಕೀಯ ಶಿಕ್ಷಣ , ಪಡೆದು ಹಲವು ಶೈಕ್ಷಣಿಕ , ಸಾಮಾಜಿಕ , ಧಾರ್ಮಿಕ ಸಂಘ ಸಂಸ್ಥೆಗಳ ಒಡನಾಟ ಹೊಂದಿದವರು . ಪದವೀಧರರ ಕಷ್ಟಗಳನ್ನು ಅರಿತುಕೊಂಡು , ಉದ್ಯೋಗ ಅವಕಾಶ ಸೇರಿದಂತೆ ಎಲ್ಲಾ ವಿಧವಾದ ವಿಫುಲ ಅವಕಾಶಗಳಿಗೆ ಆಗುತ್ತಿರುವ ಅಡ್ಡಿ ಆತಂಕಗಳ ಬಗ್ಗೆ ಪರಿಹಾರಕ್ಕಾಗಿ ವಿಧಾನಪರಿಷತ್ತ್ ನಲ್ಲಿ ಅಗತ್ಯ ಶಾಸನದ ಬಗ್ಗೆ ಗಟ್ಟಿ ಧ್ವನಿಯಾಗಿ ಮಾತಾನಾಡುವ ವ್ಯಕ್ತಿಯಾಗಿದ್ದಾರೆ. ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಹಿಂದಿನ ಬಾರಿಯೂ ಶಿಕ್ಷಕರ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ತನ್ನ ಇತಿಮಿತಿಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡವರು. ಈ ಹಿನ್ನಲೆಯಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಕೈ ಬಲ ಪಡಿಸುವ ಉದ್ದೇಶ ಹಾಗೂ ರಾಜ್ಯದಲ್ಲಿ ಜನಪರ ಶಾಸನಗಳನ್ನು , ವಿಧಾನ ಪರಿಷತ್ತ್ ನ ಮೂಲಕ ರಕ್ಷಿಸುವ ಸಲುವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಸಂಬಂಧಿಸಿದ ಮತದಾರರಲ್ಲಿ ಕೇಳಿಕೊಂಡಿದ್ದಾರೆ.