ಚಿತ್ರಗಳು ಹಾಗೂ ವಿಡಿಯೋ ಕೃಪೆ: ವರುಣ್ ಕಲ್ಲಡ್ಕ , ಮಾಹಿತಿ: ಸಾರ್ವಜನಿಕರು ಹಾಗೂ ಬಸ್ ಪ್ರಯಾಣಿಕರು ಹಾಗೂ ದ್ವಿಚಕ್ರವಾಹನ ಸವಾರರು
ಇದು ಬಂಟ್ವಾಳನ್ಯೂಸ್ ಜನಪರ ಕಾಳಜಿಯಿಂದ ಮತ್ತೆ ಮತ್ತೆ ನೀಡುತ್ತಿರುವ ವರದಿ. ಕಲ್ಲಡ್ಕ ಸಮಸ್ಯೆ ಕುರಿತು ಸಾಕಷ್ಟು ವರದಿಗಳನ್ನು ಬಂಟ್ವಾಳನ್ಯೂಸ್ ಸಹಿತ ಬಂಟ್ವಾಳದ ಎಲ್ಲ ಮಾಧ್ಯಮಗಳು, ವೃತ್ತಪತ್ರಿಕೆಗಳು ಸಾರ್ವಜನಿಕರ ಪರ ಕಾಳಜಿಯಿಂದ ವರದಿ ಮಾಡಿದ್ದವು. ಕಾಮಗಾರಿ ನಡೆಯುವಾಗ ಸಮಸ್ಯೆ ಇರುವುದು ಸಹಜ. ಆದರೆ ದೈನಂದಿನ ಜೀವನವನ್ನೇ ಬುಡಮೇಲು ಮಾಡುವಂಥ ವಾತಾವರಣ ನಿರ್ಮಾಣ ಮಾಡಬಾರದು ಎಂಬುದಷ್ಟೇ ಇಲ್ಲಿನ ಆಶಯ.. ಮುಂದೆ ಓದಿರಿ.
ಮುಂಗಾರುಪೂರ್ವ ಮಳೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ನಿರೀಕ್ಷಿಸಿದಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿಗಾದಲ್ಲಿ ನಡೆಯುತ್ತಿರುವ ಕಲ್ಲಡ್ಕ ಫ್ಲೈಓವರ್ ಕಾಮಗಾರಿಯ ಹಿನ್ನೆಲೆ ಕಲ್ಲಡ್ಕದ ಸುಮಾರು ಎರಡು ಕಿ.ಮೀ. ದೂರ ಸಂಪೂರ್ಣ ಕೆಸರುಮಯವಾಗಿದೆ.
ಮಳೆಯ ಸಂಭ್ರಮ ಒಂದೆಡೆಯಾದರೆ, ಮಂಗಳೂರು ಬೆಂಗಳೂರು ಸಂಪರ್ಕದ ಪ್ರಮುಖ ಮಾರ್ಗವಾದ ಕಲ್ಲಡ್ಕದಲ್ಲಿ ಸಿಂಗಲ್ ರೋಡ್ ಕೂಡ ಟ್ರಾಫಿಕ್ ಜಾಮ್ ಆಗುತ್ತಿದೆ. ಮಳೆ ಬಂದ ಕೂಡಲೇ ರಸ್ತೆ ಹೊಳೆಯಂತಾಗುತ್ತದೆ. ನೀರು ಹರಿದುಹೋಗಲು ಯಾವುದೇ ವ್ಯವಸ್ಥೆ ಕಲ್ಪಿಸದೇ ಇರುವುದು ಇದಕ್ಕೆ ಕಾರಣ ಹಾಗೂ ರಸ್ತೆ ಸಮಸ್ಯೆ ಉಂಟಾಗುತ್ತದೆ ಎಂದು ಮೊದಲೇ ಗೊತ್ತಿದ್ದರೂ ಸಾಕಷ್ಟು ಮುಂಜಾಗರೂಕತೆಯನ್ನು ಮಾಡದೇ ಇರುವುದು ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ. ಕಲ್ಲಡ್ಕದಲ್ಲಿ ನಡೆದುಕೊಂಡು ಹೋಗುವವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಹೋಗಬೇಕಷ್ಟೇ.. ಏಕೆಂದರೆ ಪಾದವಿಡೀ ಕೆಸರಿನಲ್ಲಿ ಮುಳುಗುತ್ತದೆ. ಇನ್ನಷ್ಟು ಚಿತ್ರಗಳಿಗೆ ಸ್ಕ್ರೋಲ್ ಮಾಡಿರಿ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…