ಬಂಟ್ವಾಳ

ಮಳೆ ಬಂತು, ಮತ್ತೆ ಶುರುವಾಯ್ತು ಮಂಗಳೂರಿಗೆ ಬಸ್ ಕಾಯುವವರಿಗೆ ಸಮಸ್ಯೆಗಳ ಸರಮಾಲೆ, ಕೆಸರುಮಯವಾಗಿದೆ ಬಿ.ಸಿ.ರೋಡ್

2016ರಲ್ಲಿ ಬಂಟ್ವಾಳನ್ಯೂಸ್ ಆರಂಭಗೊಂಡ ದಿನದಿಂದ  ಬಿ.ಸಿ.ರೋಡ್ ನ ಮಂಗಳೂರಿಗೆ ತೆರಳುವ ಬಸ್ ಗಾಗಿ ಜನರು ಕಾಯುವ ಬವಣೆ ಹಾಗೂ ಸರ್ವೀಸ್ ರಸ್ತೆಯ ಅವ್ಯವಸ್ಥೆ, ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದೇ ಇರುವ ವಿಚಾರಗಳ ಕುರಿತು ಜನಪರವಾಗಿ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ. ಇದೀಗ ಮತ್ತೆ  ಮಳೆ ಬಂದಿದೆ. ಮಂಗಳೂರಿಗೆ ತೆರಳುವ ಬಸ್ ನಿಲ್ದಾಣ ಪೂರ್ತಿ ಕೆಸರುಮಯವಾಗಿದೆ. ಕಂಬಳದ ಗದ್ದೆಯಂತಾಗಿದೆ ಈ ನಿಲ್ದಾಣ. 

ಬಿ.ಸಿ.ರೋಡಿನ ಈ ನಿಲ್ದಾಣಕ್ಕೆ ಇತ್ತೀಚೆಗೆ ರೋಟರಿ ಟೌನ್ ನವರು ಬಸ್ ತಂಗುದಾಣವೊಂದನ್ನು ನಿರ್ಮಿಸಿದ್ದನ್ನು ಹೊರತುಪಡಿಸಿದರೆ, ಸರಕಾರಿ ವ್ಯವಸ್ಥೆಯಿಂದ ಇದುವರೆಗೂ ಪ್ರಯಾಣಿಕರಿಗೆ ಅನುಕೂಲವಾಗುವ ಯಾವುದೇ ವ್ಯವಸ್ಥೆಗಳು ನಿರ್ಮಾಣವಾಗಿಲ್ಲ. ಬದಲಿಗೆ ನಿಲ್ಲಲೂ ಆಗದಂಥ ಕೆಸರು , ನೀರು ಹರಿದು ಹೋಗದಂಥ ವ್ಯವಸ್ಥೆಯನ್ನಷ್ಟೇ ನೋಡಬಹುದು. ಈ ಹಿಂದೆ ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾದ ವರದಿ ಲಿಂಕ್ ಇಲ್ಲಿದೆ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts

ಬಿ.ಸಿ.ರೋಡ್ ನಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…

1 day ago