ಬಂಟ್ವಾಳ : ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ 2024-25 ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಯಕ್ರಮ ದಿನೇಶ್ ಸುವರ್ಣ ರಾಯಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರ ವಿವರ ಹೀಗಿದೆ.
ಪ್ರಥಮ ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ ಪಳ್ಳಿಕಂಡ, ದ್ವಿತೀಯ ಉಪಾಧ್ಯಕ್ಷರಾಗಿ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿಯಾಗಿ ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿಯಾಗಿ ಸುನೀಲ್ ಸಾಲ್ಯಾನ್ ರಾಯಿ, ಕೋಶಾಧಿಕಾರಿಯಾಗಿ ಗೀತಾ ಜಗದೀಶ್ ಕಂಜತ್ತೂರು ಆಯ್ಕೆಯಾದರು.
ಸಾಂಸ್ಕೃತಿಕ ನಿರ್ದೇಶಕರಾಗಿ ಧನುಷ್ ಮಧ್ವ, ಕ್ರೀಡಾ ನಿರ್ದೇಶಕರಾಗಿ ಮಧುಸೂಧನ್ ಮಧ್ವ, ಆರೋಗ್ಯ ನಿರ್ದೇಶಕರಾಗಿ ಮಹೇಶ್ ಬೊಳ್ಳಾಯಿ, ಸಮಾಜ ಸೇವಾ ನಿರ್ದೇಶಕರಾಗಿ ಪುರುಷೋತ್ತಮ್ ಕಾಯರ್‌ಪಲ್ಕೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಲೋಹಿತ್ ಕನಪಾದೆ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ರಾಜೇಂದ್ರ ಪಲ್ಲಮಜಲು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಕಿರಣ್ ರಾಜ್ ಪೂಂಜರಕೋಡಿ, ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾಗಿ ಪ್ರಜಿತ್ ಕುಮಾರ್ , ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾಗಿ ಬ್ರಿಜೇಶ್ ಕಂಜತ್ತೂರು, ಪ್ರಚಾರ ನಿರ್ದೇಶಕರಾಗಿ ಶ್ರವಣ್ ಅಗ್ರಬೈಲು, ವಿದ್ಯಾನಿಧಿ ನಿರ್ದೇಶಕರಾಗಿ ವಿಕ್ರಮ್ ಶಾಂತಿ, ‘ಮಹಿಳಾ ಸಂಘಟನಾ ನಿರ್ದೇಶಕರಾಗಿ ಹರಿಣಾಕ್ಷಿ ನಾವೂರು, ಸಂಘಟನಾ ಕಾರ್ಯದರ್ಶಿಗಳಾಗಿ ಉದಯ್ ಪೂಜಾರಿ ಮೇನಾಡು ಸೃಜನಿ ಬೊಳ್ಳಾಯಿ ಹಾಗೂ ಸಲಹೆಗಾರರಾಗಿ ಮಾಜಿ ಅಧ್ಯಕ್ಷರಾದ ಟಿ.ಶಂಕರ ಸುವರ್ಣ ಆಯ್ಕೆಯಾಗಿದ್ದಾರೆ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಪೂಂಜರೆಕೋಡಿ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯ ಘೋಷಣೆ ಮಾಡಿದರು