ಪ್ರಮುಖ ಸುದ್ದಿಗಳು

ಹೆದ್ದಾರಿ ಕಾಮಗಾರಿ ವೇಳೆ ಸುರಕ್ಷತೆ: ಬಿ.ಸಿ.ರೋಡ್, ಕಲ್ಲಡ್ಕಗಳಿಗೆ ಭೇಟಿ ನೀಡಿದ ಅಧಿಕಾರಿಗಳು

ಗುರುವಾರ ತಹಸೀಲ್ದಾರ್ ಅರ್ಚನಾ ಡಿ. ಭಟ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು.

ಕಾಮಗಾರಿ ನಡೆಯುತ್ತಿದೆ!!!! — ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಸಾಗುವ ವೇಳೆ ಎಚ್ಚರವಿರಲಿ!!

ಜಾಹೀರಾತು

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯ ಕಾಮಗಾರಿ ನಡೆಯುತ್ತಿರುವುದ್ರಿಂದ ಮುಚ್ಚಿ ಹೋಗಿರುವ ಚರಂಡಿ ಮತ್ತು ಮಣ್ಣು ಕಡ್ಡಿ ತುಂಬಿರುವ ಚರಂಡಿಗಳನ್ನು ಸ್ವಚ್ಛ ಗೊಳಿಸುವುದು, ಅಪಘಾತಗಳನ್ನು ತಡೆಗಟ್ಟಲು ಸೂಕ್ತ  ಎಚ್ಚರಿಕೆ ಫಲಕ ಇತ್ಯಾದಿಗಳನ್ನು ಅಳವಡಿಸಲು ಸೂಚಿಸಲಾಯಿತು.ಕಲ್ಲಡ್ಕದಲ್ಲಿ ಫ್ಲೈಓವರ್ ಮೇಲಿಂದ ಬಾರಿ ಮಳೆಗೆ ಅಳವಡಿಸಿರುವ ಕಬ್ಬಿಣದ ಅಥವಾ ಭಾರವಾದ ವಸ್ತುಗಳು ಸಾರ್ವಜನಿಕರು ಅಥವಾ ವಾಹನಗಳಿಗೆ ಬೀಳುವ ಸಂಭವ ಇದ್ದು ಈ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಲಾಯಿತು.

ಜಾಹೀರಾತು

ಅದಾದ ಬಳಿಕ ಸಹಾಯಕ ಕಮೀಷನರ್ ಹರ್ಷವರ್ಧನ, ತಹಸೀಲ್ದಾರ್ ಅರ್ಚನಾ ಭಟ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಂಚಾರ ವಿಭಾಗದ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಕಲ್ಲಡ್ಕ ಮತ್ತು ಬಿ.ಸಿ.ರೋಡ್ ನ ವಿಪತ್ತು ಉಂಟಾಗಬಹುದಾದ ಪ್ರದೇಶಗಳಿಗೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕಲ್ಲಡ್ಕ ಮತ್ತು ಬಿ.ಸಿ.ರೋಡಿನ ಸಮಸ್ಯೆಗಳ ಕುರಿತು ಬಂಟ್ವಾಳನ್ಯೂಸ್ ಸೇರಿದಂತೆ ಮಾಧ್ಯಮಗಳು ವಿಸ್ತೃತ ವರದಿಗಳನ್ನು ಮಾಡಿವೆ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ