ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್, ವಿದ್ಯಾಗಿರಿ ಇಲ್ಲಿ ೨೦೨೩-೨೪ನೇ ಸಾಲಿನ ಒಟ್ಟು ೪೦ ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, ೧೭ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲಯು ಸತತ ೧೩ನೇ ಬಾರಿ ಶೇ. ೧೦೦ ಫಲಿತಾಂಶ ದಾಖಲಿಸಿರುತ್ತದೆ. ವಿವರಗಳಿಗೆ ಮುಂದೆ ಓದಿರಿ
ಶಾರ್ವರಿ ಮಯ್ಯ (೯೫.೬%), ಅನ್ವಿ ಪೂಂಜಾ (೯೪.೪%), ಅಮೃತ್ ನಾಯಕ್ ಬಿ (೯೩.೮%), ರೋಹನ್ ಎಸ್ (೯೨.೪%), ವೃದ್ಧಿ ಜೆ.ಪಿ (೯೨%), ಧನ್ವಿ ಕೇಶವ (೯೧%), ಅನನ್ಯಾ (೯೦.೮%), ಎಸ್ ಹಿರಣ್ಮಯಿ (೯೦.೮%), ಭೂಮಿಕ ಎಸ್ ಪೂಜಾರಿ (೯೦.೬%), ವೃದ್ಧಿ ಶೆಟ್ಟಿಗಾರ್ (೯೦.೬%) ಅಂಕಗಳನ್ನು ಪಡೆದಿರುತ್ತಾರೆ. ಇವರಿಗೆ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್‍ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಮತ್ತು ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ಫೊಟೋಗಳಿಗೆ ಮುಂದೆ ಓದಿರಿ.