ಫರಂಗಿಪೇಟೆ: ಮಾರಿಪಳ್ಳದಲ್ಲಿ ಮಂಗಳವಾರ ಸಂಜೆ ಲಾರಿಯಡಿ ಬೈಕ್ ಬಿದ್ದು ನಡೆದ ಅಪಘಾತದಲ್ಲಿ ಸೋನು (19) ಎಂಬಾತ ಸಾವನ್ನಪ್ಪಿದ್ದು, ಮತ್ತೋರ್ವ ಪ್ರಸಾದ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರೂ ಬೈಕ್ ಸವಾರರು.
ನೆಲ್ಯಾಡಿಯ ಹೋಟೆಲ್ ಒಂದರಲ್ಲಿ ಕೆಲಸಕ್ಕಿದ್ದ ಉತ್ತರಪ್ರದೇಶ ಮೂಲದ ಸೋನು ಮತ್ತು ಕಾರ್ಕಳ ನಿವಾಸಿ ಪ್ರಸಾದ್, ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಮಾರಿಪಳ್ಳ ಜಂಕ್ಷನ್ ನಲ್ಲಿ ಇರಿಸಲಾಗಿದ್ದ ಬ್ಯಾರಿಕೇಟ್ ಗೆ ಡಿಕ್ಕಿ ಹೊಡೆದಿದ್ದಾರೆ. ಲಾರಿಯೊಂದನ್ನು ಓವರ್ ಟೇಕ್ ಮಾಡುವ ಸಂದರ್ಭ ಬ್ಯಾರಿಕೇಟ್ ಗಮನಿಸದೆ ಈ ಅವಘಡ ನಡೆದಿದೆ. ಈ ಸಂದರ್ಭ ಇಬ್ಬರೂ ರಸ್ತೆಗೆಸೆಯಲ್ಪಟ್ಟು, ಲಾರಿಯ ಚಕದ್ರದಡಿ ಬಿದ್ದಿದ್ದಾರೆ. ಈ ಸಂದರ್ಭ ಸೋನು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)