ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟೊ ಸಮೀಪ ಈ ದೃಶ್ಯ ಯಾವಾಗಲೂ ಕಂಡುಬರುತ್ತದೆ. ಬಿ.ಸಿ.ರೋಡ್ ನಿಂದ ಮೂಡುಬಿದಿರೆಗೆ ಹೋಗುವ ದಾರಿಯಲ್ಲಿ ಲೊರೆಟ್ಟೊ ಕಡೆ ಸಾಗುವಾಗ ಬಲಭಾಗದಲ್ಲಿ ಕಸದ ರಾಶಿ ಈ ಪರಿಸರಕ್ಕೂ ಕಪ್ಪು ಚುಕ್ಕೆ. ಯಾರೋ ಹೊರಗಿನಿಂದ ವಾಹನದಲ್ಲಿ ಬಂದು ಕಸ ಸುರಿಯುತ್ತಾರೆ ಎನ್ನಲಾಗುತ್ತಿದೆ. ಗಾಳಿಗೆ ಪ್ಲಾಸ್ಟಿಕ್ ಗಳು ಹಾರಾಡಿ, ದ್ವಿಚಕ್ರ ವಾಹನ ಸವಾರರ ಮೇಲೆ ಬೀಳುವುದಂಟು. ಕಸ ಎಸೆಯುವುದು ತಪ್ಪು, ಅವುಗಳನ್ನು ನಿಯಂತ್ರಿಸುವ ಕೆಲಸವನ್ನು ಆಡಳಿತ ಮಾಡಬೇಕು, ಒಂದು ವೇಳೆ ಕಸದ ರಾಶಿ ಕಂಡುಬಂದಲ್ಲಿ ಅವುಗಳನ್ನು ತೆರವುಗೊಳಿಸುವ ಕೆಲಸವನ್ನೂ ಮಾಡಬೇಕು ಎನ್ನುತ್ತಾರೆ ನಿತ್ಯಪ್ರಯಾಣಿಕರು. ಈ ಸಮಸ್ಯೆ ಹಲವು ವರ್ಷಗಳಿಂದ ಇದೆ. ಇದಕ್ಕೆ ಪರಿಹಾರ ಯಾವಾಗ?