ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಮಗದೊಮ್ಮೆ ಅಧಿಕಾರಕ್ಕೆ ಬಂದರೆ ಕಾರ್ಮಿಕ ಕಾಯ್ದೆ ಕಾನೂನುಗಳು ಕೈ ತಪ್ಪಿ ಹೋಗಲಿದೆ. ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಅಭಿಪ್ರಾಯಪಟ್ಟರು.
ಬಂಟ್ವಾಳದ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಎಐಟಿಯುಸಿ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಜರುಗಿದ ಮೇ ದಿನಾಚರಣೆ 2024 ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡುತ್ತಿದ್ದರು.
ಈಗಾಗಲೇ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕೋಡ್ ಗಳಾಗಿ ಮಾರ್ಪಾಡು ಮಾಡಿದ ಪರಿಣಾಮ ಹಲವಾರು ಕಾನೂನುಗಳು ವಜಾಗೊಂಡಿದೆ.ಎಂದರು. ಸಾರ್ವಜನಿಕ ಸಭೆಗೆ ಮುನ್ನ ಧ್ವಜಾರೋಹಣ ನಡೆಯಿತು.
ಎಐಟಿಯುಸಿ ಬಂಟ್ವಾಳ ತಾಲೂಕಿನ ಹಿರಿಯ ಮುಖಂಡ ಬಿ.ಬಾಬು ಭಂಡಾರಿ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕ ಸಭೆ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಜಿಲ್ಲಾ ನಾಯಕಿ ಶಮಿತಾ, ಎಐಟಿಯುಸಿ ಜಿಲ್ಲಾ ಯುವ ನಾಯಕ ಪ್ರೇಮನಾಥ ಕೆ ಉಪಸ್ಥಿತರಿದ್ದರು. ನೇತೃತ್ವವನ್ನು ಎಐವೈಎಫ್ ನ ಬಂಟ್ವಾಳದ ನಾಯಕ ಹರ್ಷಿತ್, ಮೋಹನ್ ಅರಳ, ಸುರೇಶ್ ಕೆ, ಭಾರತೀಯ ಮಹಿಳಾ ಒಕ್ಕೂಟ ದ ವನಜಾಕ್ಷಿ, ಸರೋಜಿನಿ, ಕುಸುಮಾ ವಹಿಸಿದ್ದರು. ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.