ಮನೆಯಲ್ಲೇ ಕೆಲ ದಿನಗಳ ಹಿಂದೆ ಮತ ಚಲಾಯಿಸಿದ್ದ ಮಾಜಿ ಸೈನಿಕ ಬುಧವಾರ ನಿಧನ ಹೊಂದಿದ್ದಾರೆ. ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿವೃತ್ತ ಯೋಧ ಮಾಧವ ಪ್ರಭು (85) ನಿಧನ ಹೊಂದಿದವರು. ಪತ್ನಿ, ಇಬ್ಬರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಅವರು, ವೈದ್ಯರ ಅನುಮತಿ ಪಡೆದು, ಏಪ್ರಿಲ್ 15ರಂದು ಮನೆಗೆ ತೆರಳಿ ಮತ ಚಲಾಯಿಸಿದ್ದರು ಮಲೇರಿಯಾ ನಿರ್ಮೂಲನಾ ವಿಭಾಗದ ತಪಾಸಣಾಧಿಕಾರಿ ಆಗಿ ಕರ್ತವ್ಯ ಸಲ್ಲಿಸಿದ್ದ ಅವರು, ಸೈನ್ಯದಲ್ಲಿ ನಿವೃತ್ತಿ ಹೊಂದಿದ ಬಳಿಕ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು.