ಬಂಟ್ವಾಳ: ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಸುರೇಶ್ ಕುಮಾರ್ ನಾವೂರು ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಮುದಾಯ ಭವನಕ್ಕೆ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಹುಟ್ಟಿದ ನನಗೆ ಹಿಂದುಳಿದ ವರ್ಗ, ಶೋಷಿತ ಸಮಾಜದ ಜನರ ನೋವು, ಸಮಸ್ಯೆಗಳ ಅರಿವಿದೆ. ಬಡಜನರ ನೋವಿಗೆ ನಾನು ಸ್ಪಂದಿಸಿಕೊಂಡು ಬಂದಿದ್ದು ಲೋಕಸಭಾ ಸದಸ್ಯನಾಗುವ ಅವಕಾಶ ಸಿಕ್ಕಲ್ಲಿ, ಬಡವರ ಶೋಷಿತರ ಧ್ವನಿಯಾಗಿ ನಿಂತು ಕೆಲಸ ಮಾಡುತ್ತೇನೆ ಎಂದರು. ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ತನ್ನಿಂದಾಗುವ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ, ಸಮುದಾಯದ ಪ್ರಮುಖರಾದ ಸುರೇಶ್ ಕುಮಾರ್ ನಾವೂರು, ಪರಮೇಶ್ವರ ಮೂಲ್ಯ, ದಿವಾಕರ ಪಂಬದಬೆಟ್ಟು, ಸುಕುಮಾರ್ ಬಂಟ್ವಾಳ, ನಾರಾಯಣ ಸಿ. ಪೆರ್ನೆ, ಮನೋಹರ ನೇರಂಬೋಳು, ದೇವಪ್ಪ ಕುಲಾಲ್ ಪಂಜಿಕಲ್ಲು, ರಮೇಶ್ ಎಂ. ಪಣೋಲೀಬೈಲು, ಚಂದ್ರಹಾಸ ಪಲ್ಲಿಪ್ಪಾಡಿ, ಉಮೇಶ್ ಕುಲಾಲ್, ಸತೀಸ್ ಕುಲಾಲ್, ನಾಗೇಶ್ ಬಾಳೆಹಿತ್ಲು, ಲಕ್ಷ್ಮಣ್ ಕುಲಾಲ್, ರಮೇಶ್ ಸಾಲ್ಯಾನ್ ಸಂಚಯಗಿರಿ, ಜಯಗಣೇಶ್, ಕವಿರಾಜ್ ಚಂದ್ರಿಗೆ, ಯೋಗೀಶ್ ಮಿತ್ತಬೈಲು, ಉಮಾಕರ ಮೊದಲಾದವರು ಉಪಸ್ಥಿತರಿದ್ದರು.