ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳ್ತಂಗಡಿ ತಾಲೂಕಿನಾದ್ಯಂತ ಸುರಿದ ಮುಂಗಾರು ಪೂರ್ವ ಭಾರಿ ಮಳೆ ಹರ್ಷ ತಂದಿದೆ.
ಆದರೆ ಕಳೆದ ಒಂದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ 73 ರಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯನ್ನು ಸಂಪೂರ್ಣ ಅಗೆದು ಮಣ್ಣಿನ ರಸ್ತೆಯಾಗಿಸಿದ್ದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಧೂಳುಮಯವಾಗಿತ್ತು. ಇದು ಮುಂಡಾಜೆ ಸಮೀಪದ ರಸ್ತೆಯ ಸ್ಥಿತಿ.
ಇದೇಗ ಏಕಾಏಕಿ ಮಳೆ ಸುರಿದ ಪರಿಣಾಮ ರಸ್ತೆ ಕೆಸರುಮಯ ವಾಗಿರುವುದಲ್ಲದೆ ವಾಹನ ಸವಾರರು ಸ್ಕೇಟಿಂಗ್ ನಲ್ಲಿ ಸಾಗಿದಂತಾಗಿದೆ. ಶುಕ್ರವಾರ ರಾತ್ರಿ ಹಲವಾರು ದ್ವಿಚಕ್ರ ವಾಹನ ಬಿದ್ದು ಆಘಾತವಾಗಿದ್ದು, ಶನಿವಾರ ಮುಂಜಾನೆ ಮಳೆಗೆ ಸಂಪೂರ್ಣ ಸಂಚಾರ ಅಯೋಮಯವಾಗಿದೆ.