ಪ್ರಮುಖ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಕಾಂಗ್ರೆಸ್ ವಶವಾಗಲಿದೆ: ಪುತ್ತೂರಿನ ಕಾವುವಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪದ್ಮರಾಜ್ ಪೂಜಾರಿ ವಿಶ್ವಾಸ

ಪುತ್ತೂರು: ಕಾಂಗ್ರೆಸ್ ಗೆಲ್ಲುವ ಸೂಚನೆ ಸ್ಪಷ್ಟವಾಗಿದೆ. ಹಿಂದೆ 40 ವರ್ಷ ಇದು ಕಾಂಗ್ರೆಸಿನ ಭದ್ರಕೋಟೆಯಾಗಿತ್ತು. ಈಗ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸಿನ ಭದ್ರಕೋಟೆಯಾಗಿ ಪರಿವರ್ತನೆ ಆಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕಾವುನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಬಿಜೆಪಿಗರು ಅಪಪ್ರಚಾರಕ್ಕೆ ಶುರು ಮಾಡಿದ್ದಾರೆ. ಇದಕ್ಕೆ ಎದೆಗುಂದದಿರಿ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸಿ. ಖಂಡಿತಾ ಮತದಾರರು ನಮ್ಮ ಕಡೆ ಒಲವು ತೋರಿಸುತ್ತಾರೆ. ಯಾವುದೇ ಕಾರಣಕ್ಕೂ ನಾವು ದ್ವೇಷದ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.
ಹಿಂದುತ್ವದ ಬಗ್ಗೆ ಮಾತನಾಡುವವರು ನಾವು ಮಾಡಿರುವಷ್ಟು ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ. ಬರೀಯ ಅಪಪ್ರಚಾರದಿಂದಷ್ಟೇ ಅಧಿಕಾರ ಪಡೆದುಕೊಂಡಿದ್ದಾರೆ. ಇದೀಗ ದೈವಗಳಿಗೆ ನ್ಯಾಯ ಕೊಡಿಸುವ ಮಾತನ್ನು ಆಡುತ್ತಿದ್ದಾರೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಐದು ಗ್ಯಾರೆಂಟಿಗಳನ್ನು ರಾಜ್ಯ ಸರಕಾರ ಜಾರಿಗೆ ತಂದಾಗ ಇನ್ನು ಅನುದಾನ ಇಲ್ಲ ಎಂದು ಬಿಜೆಪಿಗರು ಹೇಳಿದರು. ಪುತ್ತೂರು ಕ್ಷೇತ್ರಕ್ಕೆ 1400 ಕೋಟಿ ರೂ. ಅನುದಾನ ಬಂದಾಗ ಬಿಜೆಪಿಗರಿಗೆ ಉತ್ತರವೇ ಇಲ್ಲದಂತಾಗಿತ್ತು. ಹೀಗಿದ್ದರೂ ಕೆಲವರು ಪತ್ರಿಕಾಗೋಷ್ಠಿ ನಡೆಸಿ ಅನುದಾನದ ಬಗ್ಗೆ ಮಾತನಾಡಿದರು. ಇದಕ್ಕೆ ಉತ್ತರ ನೀಡಿಲ್ಲ. ಮುಂದೆ ಸಚಿವರನ್ನು ಕರೆಸಿ, ದೊಡ್ಡ ಕಾರ್ಯಕ್ರಮ ನಡೆಸಿ ಯೋಜನೆಯನ್ನು ಉದ್ಘಾಟಿಸಲಾಗುವುದು. ಈ ಮೂಲಕ ಕಾರ್ಯದಿಂದಲೇ ಉತ್ತರ ನೀಡುತ್ತೇನೆ ಎಂದರು.
ನಾನು, ಪದ್ಮರಾಜ್ ಹಿಂದು. ನಾವು ಮಾಡಿರುವಷ್ಟು ಧಾರ್ಮಿಕ ಕೆಲಸವನ್ನು ಹಿಂದುತ್ವದ ಬಗ್ಗೆ ಮಾತನಾಡುವವರು ಮಾಡಿಲ್ಲ ಎಂದು ಅಶೋಕ್ ರೈ ಹೇಳಿದರು.
ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಮಾತನಾಡಿ, ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿರುವುದು ಕಾಂಗ್ರೆಸ್ ಪಕ್ಷದ ಸಂಸದರಿಂದ. ಹಾಗಾಗಿ ಮತ್ತೊಮ್ಮೆ ಕಾಂಗ್ರೆಸ್ ಸಂಸದರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಬೇಕು. ಉತ್ತಮ ಅಭ್ಯರ್ಥಿ ಮಾತ್ರವಲ್ಲ, ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದರು.
ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಬಗ್ಗೆ ವಿರೋಧ ಪಕ್ಷದವರಿಗೆ ಒಂದೇ ಒಂದು ಕಪ್ಪು ಚುಕ್ಕೆಯನ್ನು ಹುಡುಕಲು ಸಾಧ್ಯವಾಗಿಲ್ಲ. ಅಷ್ಟು ಉತ್ತಮ ಹಾಗೂ ಸಮರ್ಥರು ನಮ್ಮ ಅಭ್ಯರ್ಥಿ. ಗೆಲುವಿನ ಗುರಿ, ಬದಲಾವಣೆಯ ಕಾವು, ಕಾವಿನಿಂದಲೇ ಆರಂಭವಾಗಿದೆ ಎಂದರು.
ಇದೇ ಸಂದರ್ಭ ಗೋವಿಂದ ಮಣಿಯಾಣಿ ಮಡ್ಯಂಗಳ, ಕಿರಣ್ ಗೌಡ ಮಡ್ಯಂಗಳ, ಶಶಿಕಿರಣ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ