ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಬಂಟ್ವಾಳದ ನರಿಕೊಂಬು ಗ್ರಾಮದ ಹಲವೆಡೆ ಅಭಿಯಾನ ನಡೆಸಿದರು.
ಮಾರುತಿನಗರ, ಮೊಗರ್ನಾಡು, ಏಳಬೆ, ಶೇಡಿಗುರಿ, ನಾಯಿಲ, ಮರ್ದೋಳಿ,ನಾಟಿ ಮತ್ತು ಶಂಭೂರು ಭಾಗದಲ್ಲಿ ಮತದಾರರ ಮನೆಗೆ ಮತ್ತು ಅಂಗಡಿಗಳಿಗೆ ಶಾಸಕ ರಾಜೇಶ್ ,ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಭೇಟಿ ನೀಡಿ ಮತಯಾಚನೆ ನಡೆಸಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ದೇಶದ ರಕ್ಷಣೆ ಮೋದಿಯವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ಮೋಹಿನಿ ವಾಮನ, ಸದಸ್ಯರಾದ ಚೇತನ್ ಏಳಬೆ, ಅರುಣ್ ಬೋರುಗುಡ್ಡೆ, ಉಷಾಲಾಕ್ಷಿ, ರವಿ ಅಂಚನ್, ರತ್ನ, ವಿನುತಾ ಪುರುಷೋತ್ತಮ, ಕಿಶೋರ್ ಶೆಟ್ಟಿ, ಪ್ರಕಾಶ್ ಮಡಿಮೊಗೆರು, ಯೋಗೀಶ್ ಶಾಂತಿಲ, ನಾರಾಯಣ ಪೂಜಾರಿ ದರ್ಖಾಸು, ಬಿಜೆಪಿ ಪ್ರಮುಖರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಸುದರ್ಶನ ಬಜ, ಸುರೇಶ್ ಕೋಟ್ಯಾನ್, ಪುರುಷೋತ್ತಮ ಸಾಲಿಯಾನ್, ಯಶೋಧರ ಕರ್ಬೆಟ್ಟು, ಆನಂದ ಎ.ಶಂಭೂರು, ಪ್ರೇಮನಾಥ ಶೆಟ್ಟಿ ಅಂತರ, ಶಶಿಧರ್ ಮಾರುತಿನಗರ, ಸಂತೋಷ್, ಉದಯ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಕೃಷ್ಣ ಕುಲಾಲ್, ನಾಗೇಶ್ ಕುಲಾಲ್, ಯಶೋಧರ ಬಂಗೇರ, ರಂಜಿತ್ ಮಾಣಿಮಜಲು,ವಸಂತ ಬೀಮಗದ್ದೆ, ಸುರೇಂದ್ರ ಕೊಪ್ಪಳಕೋಡಿ,ನಾರಾಯಣ ಕೇದಿಗೆ,ಪುರುಷೋತ್ತಮ,ಕೇಶವ ಬರ್ಕೆ, ಸತೀಶ್ ನಾಯಿಲ, ಚಿತ್ತರಂಜನ್ ಮತ್ತಿತರರು ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…