2024 ರ ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ ಎಂಬ ನೂತನ ಕಾರ್ಯಕ್ರಮ ಆಯೋಜಿಸಿದ್ದು, ಬಂಟ್ವಾಳದ ಹಲವೆಡೆ ಭೇಟಿ ನೀಡಿದ್ದಾರೆ.
ಕಳ್ಳಿಗೆ ಗ್ರಾಮದ ಬೆಂಜನಪದವು ,ದರಿಬಾಗಿಲು, ಚಂದ್ರಿಗೆ,ಗಾಂದೋಡಿ ಮತದಾರರ ಮನೆಗೆ ಬೇಟಿ ನೀಡಿ ಮತಯಾಚನೆ ನಡೆಸಿದರು. ಲೋಕಸಭಾ ಅಭ್ಯರ್ಥಿಯ ಪರಿಚಯ ಪತ್ರ,ಹಾಗೂ ಮೋದಿ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ಶಾಸಕ ರಾಜೇಶ್ ,ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹಾಗೂ ಜಿಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಜೊತೆಯಾಗಿ ನೀಡಿದರು.
ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಸದಸ್ಯರಾದ ದಾಮೋದರ ನೆತ್ತರಕೆರೆ, ರೇಶ್ಮಾ,ಮನೋಜ್ ಕಳ್ಳಿಗೆ ಪ್ರಮುಖರಾದ ದಿನೇಶ್ ಶೆಟ್ಟಿ ದಂಬೆದಾರ್, ಯೋಗೀಶ್ ದರಿಬಾಗಿಲು, ಅಖೇಶ್ ಬೆಂಜನಪದವು ಅಭಿನ್ ರೈ, ಪ್ರವೀಣ್ ಬೆಂಜನಪದವು, ಶಾರದ ಕೋಟೇಶ್,ವಸಂತಿ ಮನೋಹರ್, ಸುಗಂದಿ ಕಮಲಾಕ್ಷ, ನಮಿತಾಸುರೇಶ್, ಕಾರ್ತಿಕ್ ಬೆಂಜನಪದವು,ಪ್ರದೀಪ್ ಬೆಂಜನಪದವು,ಸಾತ್ವಿಕ್, ಯಶೋಧರ,ಕೇಶವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.