ಮಹಿಳೆಯರ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಆಡಿದ ಮಾತಿನಿಂದ ಮಹಿಳೆಯರಿಗೆ ಅಪಮಾನವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಫ್ಲೈಓವರ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಮಾತೆಯರು ಎಂದು ಹೇಳಿ ಮತ ಪಡೆಯುತ್ತಾರೆಯೇ ವಿನಃ ಅವರಿಗೆ ಗೌರವ ನೀಡುವುದು ಗೊತ್ತಿಲ್ಲ ಎಂದು ಆರೋಪಿಸಿದ ರೈ, ಮಹಿಳೆಯರೆಲ್ಲಾ ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಪಾಠ ಕಲಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಪ್ರಮುಖರಾದ ಜೋಸ್ಫಿನ್ ಡಿಸೋಜ, ಜೆಸಿಂತಾ ಡಿಸೋಜ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಐಡಾ ಸುರೇಶ್, ಪಕ್ಷ ಪ್ರಮುಖರಾದ ಅಶ್ವನಿ ಕುಮಾರ್ ರೈ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲಿಯಾನ್, ಚಂದ್ರಪ್ರಕಾಶ ಶೆಟ್ಟಿ, ಸುದರ್ಶನ ಜೈನ್, ಪದ್ಮಶೇಖರ ಜೈನ್, ಜನಾರ್ದನ ಚಂಡ್ತಿಮಾರ್, ಸಂಜೀವ ಪೂಜಾರಿ, ಮಧುಸೂದನ್ ಶೆಣೈ,ಪರಮೇಶ್ವರ ಮೂಲ್ಯ, ಅಬ್ಬಾಸ್ ಆಲಿ ಬೋಳಂತೂರು, ಸದಾಶಿವ ಬಂಗೇರ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು