ಜಿಲ್ಲಾ ಸುದ್ದಿ

ಉಳ್ಳಾಲ, ಸುರತ್ಕಲ್, ಕೂಳೂರಿನಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪಣ – ಪದ್ಮರಾಜ್ ಆರ್ ಪೂಜಾರಿ

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಉಳ್ಳಾಲ, ಸುರತ್ಕಲ್, ಕುಳೂರು ಸಹಿತ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯವನ್ನು ನಡೆಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು. ಸಂಜೆ ಹೊತ್ತಿಗೆ ಮುಡಿಪು ತಲುಪಿದ ರೋಡ್ ಶೋಗೆ ಕಾರ್ಯಕರ್ತರು, ಮುಖಂಡರು ಭರ್ಜರಿ ಸ್ವಾಗತ ಕೋರಿದರು. ಅಲ್ಲಿ ಪ್ರಚಾರ ಕಾರ್ಯ ನಡೆಸಿ, ಪೂಪಾಡಿಕಲ್ಲು, ನರಿಂಗಾನ, ಕೈರಂಗಳ, ಮಂಜನಾಡಿ, ನಾಟೆಕಲ್ಲು, ಕಿನ್ಯಾ, ಮೀನಾದಿ, ಮಿಂಪ್ರಿ ಮೊದಲಾದ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಅಭ್ಯರ್ಥಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಹೂಮಾಲೆ ಹಾಕಿ ಗೆಲುವಿಗೆ ಹಾರೈಸಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ತೆರಳುತ್ತಿದ್ದರೆ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು.

ಕಾಂಗ್ರೆಸ್ ರೋಡ್ ಶೋ ಸೋಮವಾರ ಸುರತ್ಕಲ್, ಮುಕ್ಕಾ, ಕೃಷ್ಣಾಪುರ, ಚಿತ್ರಾಪುರ, ಕಾಟಿಪಳ್ಳ, ಚೊಕ್ಕಬೆಟ್ಟು, ಪಣಂಬೂರು, ಕೂಳೂರು, ಕಾವೂರು, ಕುಂಜತ್ತಬೈಲ್ ಮೊದಲಾದ ಪ್ರದೇಶಗಳಲ್ಲಿ ಸಂಚರಿಸಿತು.

ಧಾರ್ಮಿಕ ಕ್ಷೇತ್ರಗಳ ಭೇಟಿ:

ಮುಕ್ಕ ಶ್ರೀ ರಾಮ ಮಂದಿರ, ಪಡ್ರೆ ಶ್ರೀ ಧೂಮಾವತಿ ಬಂಟರ ದೈವಸ್ಥಾನ ಭಂಡಾರ ಮನೆ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ, ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ, ಚಿತ್ರಾಪುರ ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರ, ಕುಂಜತ್ತಬೈಲ್ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸದ್ಭಾವನಾ ಸಮಿತಿ ಹಾಗೂ ಮುಕ್ಕ ಜುಮ್ಮಾ ಮಸೀದಿ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 

ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಅಲಿ, ಪ್ರತಿಭಾ ಕುಳಾಯಿ, ಪಡ್ರೆ ಶ್ರೀ ಧೂಮಾವತಿ ಬಂಟರ ದೈವಸ್ಥಾನ ಭಂಡಾರ ಮನೆಯ ಗುರಿಕಾರ ದೇವೇಂದ್ರ ಪೂಜಾರಿ, ರಮಾನಾಥ ಅಮೀನ್, ವರುಣ್ ಅಂಚನ್, ಮಹಮ್ಮದ್ ರಂಝಾ, ಸದಾಶಿವ ಜಿ. ಅಮೀನ್, ರಮೇಶ್ ಜಿ. ಅಮೀನ್, ಬೋಜ ಪಾಡಿ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿರಾಜ್ ಸುವರ್ಣ, ಪುರುಷೋತ್ತಮ ದೇವಾಡಿಗ, ಪಿ.ಜಿ. ಕುಂದರ್, ಸತೀಶ್ ಭಟ್, ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಚ ಧರ್ಮೇಂದ್ರ ಗಣೇಶಪುರ, ಯಾದವ ಶೆಟ್ಟಿ, ಚಿತ್ರಾಪುರ ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರದಲ್ಲಿ ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ  ಪಿ. ದೇವೇಂದ್ರ, ಕೇಶವ ಕಾಂಚನ, ಅಮರನಾಥ ಗುರಿಕ್ಕಾರ, ಪುರುಷೋತ್ತಮ ಕೋಟ್ಯಾನ್, ಹರೀಶ್ ಪುತ್ರನ್, ನಾಗೇಶ್ ಪುತ್ರನ್, ರಮೇಶ್ ಪುತ್ರನ್ ಹಾಗೂ ಮುಕ್ಕ ಜುಮ್ಮಾ ಮಸೀದಿಯ ರಝಾಕ್, ಎಂ.ಸಿ. ಉಮ್ಮರ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

ಪಣಂಬೂರು ಸುಂದರಿ ಲಕ್ಷ್ಮಣ್ ಬಂಗೇರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪದ್ಮರಾಜ್, ರಾಜಕೀಯದ ಕನಸು ಕಂಡವನು ನಾನಲ್ಲ. ಆದರೆ ಎಲ್ಲರ ಒತ್ತಾಸೆಯ ಮೇರೆಗೆ ರಾಜಕೀಯಕ್ಕೆ ಬರುವಂತಾಯಿತು. ನಾರಾಯಣಗುರುಗಳ ಆದರ್ಶವನ್ನೇ ಮೂಲವಾಗಿಟ್ಟುಕೊಂಡು ಸಾಮಾಜಿಕ ಕಾರ್ಯಗಳಿಗೆ ಮುಂದಾದೆ. ಇಂದು ರಾಜಕೀಯದ ಅವಕಾಶವೂ ಸಿಕ್ಕಿತು. ಈ ಅವಕಾಶವನ್ನು ಸಮಾಜದ, ಹಿಂದುಳಿದ ವರ್ಗದ, ಆರ್ಥಿಕ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಮುಂದಿನ ದಿನ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಸಮುದಾಯದವರ ಸಭೆ ಕರೆದು, ಅಹವಾಲು ಸ್ವೀಕರಿಸುವ ಕೆಲಸ ಮಾಡಲಾಗುವುದು. ಇದರ ಜೊತೆಗೆ ಉಚಿತವಾಗಿ ಶಿಕ್ಷಣ, ಆರೋಗ್ಯ ಸೇವೆ ಸಿಗಬೇಕು ಎಂಬ ಆಲೋಚನೆ ನನ್ನದು ಎಂದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts