ಪ್ರಮುಖ ಸುದ್ದಿಗಳು

ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ..ರಿಸಲ್ಟ್ ನೋಡಲು ಯಾವ ಲಿಂಕ್? ಮರುಮೌಲ್ಯಮಾಪನಕ್ಕೆ ಏನು ಮಾಡಬೇಕು? ಜಿಲ್ಲಾವಾರು ಸಾಧನೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

2023-24ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ.  6.9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಇದರ ಫಲಿತಾಂಶ ಇಂದು ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು ಸುದ್ದಿಗೋಷ್ಠಿ ನಡೆಸುವ ಮೂಲಕ ಫಲಿತಾಂಶ ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಚೆಕ್ಮಾಡುವುದು ಹೇಗೆ?

  • ವಿದ್ಯಾರ್ಥಿಗಳು ವೆಬ್ಸೈಟ್ಲಿಂಕ್ http://www.karresults.nic.in/# ಗೆ ಭೇಟಿ ನೀಡಿ.
  • ತೆರೆದ ವೆಬ್ಪೇಜ್ನಲ್ಲಿ ‘2nd PUC Main Examination Results’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್ಪೇಜ್ತೆರೆಯುತ್ತದೆ.
  • ಇಲ್ಲಿ ದ್ವಿತೀಯ ಪಿಯುಸಿ ರಿಜಿಸ್ಟರ್ನಂಬರ್ ಕೇಳಲಾಗುತ್ತದೆ.
  • ರಿಜಿಸ್ಟರ್ ನಂಬರ್ ಟೈಪಿಸಿ. ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್ಲೋಡ್ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
  • ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 2024 ಫಲಿತಾಂಶದ ಹೈಲೈಟ್ಸ್ಗಳಿಗೆ ಮುಂದೆ ಓದಿರಿ.
  • 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇಕಡ.81.15 ಬಂದಿದೆ.
  • ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಪಾಸ್.
  • ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಪಾಸ್‌.
  • ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್.
  • 97 ಶೇಕಡದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ.
  • 96.80 ಶೇಕಡದೊಂದಿಗೆ ಉಡುಪಿ ಜಿಲ್ಲೆಗೆ ಫಲಿತಾಂಶದಲ್ಲಿ ಎರಡನೇ ಸ್ಥಾನ.
  • 94.89 ಶೇಕಡದೊಂದಿಗೆ ವಿಜಯಪುರ ಜಿಲ್ಲೆಗೆ ಮೂರನೇ ಸ್ಥಾನ.
  • ಗದಗ ಜಿಲ್ಲೆಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆ ಸ್ಥಾನ.
  • ಮರು ಮೌಲ್ಯಮಾಪನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಇದಕ್ಕೆ https://kseab.karnataka.gov.in/  ವೆಬ್ಸೈಟ್ಮೂಲಕ ಅರ್ಜ ಸಲ್ಲಿಸಬಹುದು. ಮಂಡಲಿ ನಿಗದಿತ ಶುಲ್ಕವನ್ನು ಪಾವತಿಸಿ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.

ಈ ವರ್ಷ 5,52,690 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಉತ್ತೀರ್ಣ ಪ್ರಮಾಣ ಶೇಕಡ 81.15 ರಷ್ಟಿದ್ದು, ಇವರಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಶೇ 81.10ರಷ್ಟು ಸಾಧನೆ ಮಾಡಿದ್ದಾರೆ. ಗ್ರಾಮಾಂತರದ ವಿದ್ಯಾರ್ಥಿಗಳು ಶೇಕಡ ಶೇ 81.31 ಸಾಧನೆ ಮಾಡಿದ್ದಾರೆ. 32 ಜಿಲ್ಲೆಗಳ ದ್ವಿತೀಯ ಪಿಯುಸಿ ಶೇಕಡವಾರು ಫಲಿತಾಂಶ ಹೀಗಿದೆ. ದ್ವಿತೀಯ ಪಿಯುಸಿ ಜಿಲ್ಲಾವಾರು ಶೇಕಡವಾರು ಫಲಿತಾಂಶ ಹೀಗಿದೆ…

  • ದಕ್ಷಿಣ ಕನ್ನಡ ಬಾರಿ ಶೇಕಡ 97.37ರಷ್ಟು ಫಲಿತಾಂಶ ದಾಖಲಿಸಿದೆ. 2023ರಲ್ಲಿ ಇದು ಶೇಕಡ 95.33 ಆಗಿತ್ತು.
  • ಉಡುಪಿ ಜಿಲ್ಲೆಯು ಶೇಕಡ 96.80ರಷ್ಟು ಫಲಿತಾಂಶ ಪಡೆದಿದೆ. ಕಳೆದ ವರ್ಷ ಇದು ಶೇಕಡ 95.24 ಆಗಿತ್ತು.
  • ವಿಜಯಪುರವು ಬಾರಿ ಶೇಕಡ 94.89ರಷ್ಟು ಫಲಿತಾಂಶ ತನ್ನದಾಗಿಸಿಕೊಂಡಿದೆ. ಕಳೆದ ವರ್ಷದ ಶೇಕಡ 84.69ಕ್ಕೆ ಹೋಲಿಸಿದರೆ ಬಾರಿ ಉತ್ತಮ ಪ್ರಗತಿ ದಾಖಲಿಸಿದೆ.
  • ಉತ್ತರ ಕನ್ನಡ ಜಿಲ್ಲೆಯು ಬಾರಿ ಶೇಕಡ 92.51ರಷ್ಟು ಫಲಿತಾಂಶ ತನ್ನದಾಗಿಸಿದೆ. ಕಳೆದ ವರ್ಷದ ಶೇಕಡ 89.74ಕ್ಕೆ ಹೋಲಿಸಿದರೆ ಬಾರಿ ತುಸು ಪ್ರಗತಿ ದಾಖಲಿಸಿದೆ.
  • ಕೊಡಗು ಜಿಲ್ಲೆಯು ಬಾರಿ ಶೇಕಡ 92.13 ರಿಸಲ್ಟ್ಪಡೆದಿದೆ. ಕಳೆದ ವರ್ಷ ಶೇಕಡ 90.55 ಫಲಿತಾಂಶ ಪಡೆದಿತ್ತು.
  • ಬೆಂಗಳೂರು ದಕ್ಷಿಣ ಶೇಕಡ 89.57 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 82.3 ಫಲಿತಾಂಶ ಪಡೆದಿತ್ತು.
  • ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಶೇಕಡ 88.67ರಷ್ಟು ಫಲಿತಾಂಶ ಪಡೆದಿದೆ. ಇದಕ್ಕೂ ಹಿಂದಿನ ವರ್ಷ ಶೇಕಡ 82.25 ಫಲಿತಾಂಶ ದಾಖಲಿಸಿತ್ತು.
  • ಶಿವಮೊಗ್ಗ ಜಿಲ್ಲೆ ಶೇಕಡ 88.58ರಷ್ಟು ಫಲಿತಾಂಶ ತನ್ನದಾಗಿಸಿದೆ. ಕಳೆದ ವರ್ಷ ಶೇಕಡ 83.13 ಫಲಿತಾಂಶ ಪಡೆದಿತ್ತು.
  • ಚಿಕ್ಕಮಗಳೂರು ಜಿಲ್ಲೆಯು ಶೇಕಡ 88.20 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 83.28 ಫಲಿತಾಂಶ ತನ್ನದಾಗಿಸಿಕೊಂಡಿತ್ತು.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬಾರಿ ಶೇಕಡ 87.55 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 83.04 ಫಲಿತಾಂಶ ಪಡೆದಿದೆ.
  • ಬಾಗಲಕೋಟೆ ಜಿಲ್ಲೆ ವರ್ಷ: ಶೇಕಡ 87.54, ಕಳೆದ ವರ್ಷ: 78.79
  • ಕೋಲಾರ: ವರ್ಷ: 86.12, ಕಳೆದ ವರ್ಷ: 79.2
  • ಹಾಸನ: ವರ್ಷಶೇಕಡ 85.83, ಕಳೆದ ವರ್ಷ– 83.14
  • ಚಾಮರಾಜನಗರ ಜಿಲ್ಲೆ: ವರ್ಷ ಶೇಕಡ 84.99 ಮತ್ತು ಕಳೆದ ವರ್ಷ ಶೇಕಡ 81.92
  • ಚಿಕ್ಕೋಡಿ ಜಿಲ್ಲೆ ವರ್ಷಶೇಕಡ 84.10 ಕಳೆದ ವರ್ಷ ಶೇಕಡ 78.76
  • ರಾಮನಗರ ಜಿಲ್ಲೆ ವರ್ಷಶೇಕಡ 83.58 ಮತ್ತು ಕಳೆದ ವರ್ಷಶೇಕಡ 78.12
  • ಮೈಸೂರು: ವರ್ಷ ಶೇಕಡ 83.13, ಕಳೆದ ವರ್ಷ– 79.89
  • ಚಿಕ್ಕಬಳ್ಳಾಪುರ: ವರ್ಷ ಶೇಕಡ 82.84, ಕಳೆದ ವರ್ಷ ಶೇಕಡ 77.77
  • ಬೀದರ್: ವರ್ಷ ಶೇಕಡ 81.69 ಕಳೆದ ವರ್ಷಶೇಕಡ 78
  • ತುಮಕೂರು: ವರ್ಷಶೇಕಡ 81.03, ಕಳೆದ ವರ್ಷಶೇಕಡ 74.5
  • ದಾವಣಗೆರೆ: ವರ್ಷ ಶೇಕಡ 80.96, ಕಳೆದ ವರ್ಷ ಶೇಕಡ 75.72
  • ಕೊಪ್ಪಳ: ವರ್ಷ ಶೇಕಡ 80.83, ಕಳೆದ ವರ್ಷ ಶೇ 74.8
  • ಧಾರವಾಡ: ವರ್ಷ ಶೇ 80.70, ಕಳೆದ ವರ್ಷ ಶೇ 73.54
  • ಮಂಡ್ಯ: ವರ್ಷ ಶೇ 80.56, ಕಳೆದ ವರ್ಷ ಶೇ 77.47
  • ಹಾವೇರಿ: ವರ್ಷ ಶೇ 78.36, ಕಳೆದ ವರ್ಷ ಶೇ 74.13
  • ಯಾದಗಿರಿ: ವರ್ಷ ಶೇ 77.29, ಕಳೆದ ವರ್ಷ ಶೇ 62.98
  • ಬೆಳಗಾವಿ: ವರ್ಷಶೇ 77.20, ಕಳೆದ ವರ್ಷ ಶೇ 73.98
  • ಕಲಬುರಗಿ: ವರ್ಷಶೇ 75.48, ಕಳೆದ ವರ್ಷ ಶೇ 69.37
  • ಬಳ್ಳಾರಿ: ವರ್ಷ ಶೇ 74.70, ಕಳೆದ ವರ್ಷ ಶೇ 69.55
  • ರಾಯಚೂರು: ವರ್ಷ ಶೇಕಡ 73.11, ಕಳೆದ ವರ್ಷ ಶೇ 66.21
  • ಚಿತ್ರದುರ್ಗ: ವರ್ಷ ಶೇಕಡ 72.92, ಕಳೆದ ವರ್ಷ ಶೇಕಡ 69.5 ಫಲಿತಾಂಶ
  • ಗದಗ: ವರ್ಷ ಶೇ 72.86 ಫಲಿತಾಂಶ ಪಡೆದಿದೆ, ಕಳೆದ ವರ್ಷ ಶೇಕಡ 66.91 ಪಡೆದಿತ್ತು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ