ಬಾಳ್ತಿಲ ಗ್ರಾಮದ ದಾಸಕೋಡಿ ಅಂಗನವಾಡಿಯ ಚಿಣ್ಣರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ನಿವೃತ್ತ ಅಧ್ಯಾಪಕ ರಾಧಾಕೃಷ್ಣ ಅಡ್ಯಂತಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಚಾರ್ವಿ, ರವಿತೇಜ, ಮೋಕ್ಷ, ದಿಯಾ, ಶ್ರವಣ್, ದಕ್ಷ, ತ್ರಿಶಾಲ್ ಮತ್ತು ಯಶ್ವನ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಂಗನವಾಡಿಗೆ ಜೋಕಾಲಿ ನೀಡಲು ಸಹಕಾರ ನೀಡಿದ ಗಣೇಶ್ ಪೆರಾಜೆ ಅವರನ್ನು ಗೌರವಿಸಲಾಯಿತು. ಶುಭಶ್ರೀ, ಕವಿತಾ ಅಡ್ಯಂತಾಯ, ಕಲಾವತಿ, ಸವಿತಾ, ಪೋಷಕರಾದ ಜಯಲಕ್ಷ್ಮೀ, ಬಾಲವಿಕಾಸ ಸಮಿತಿಯ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆ ಲಲಿತಾ ಜಿ, ಯಶೋಧಾ ಹಾಜರಿದ್ದರು. ಶಿಲ್ಪಾ ಮತ್ತು ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು. ಚಾರ್ವಿ, ನಯನ ಸ್ವಾಗತಿಸಿದರು. ಹಿಮಾಲಿ, ಮಮತಾ ವಂದಿಸಿದರು. ದಕ್ಷಾ, ಪ್ರಜ್ಞಾ, ಅಮಿತಾ ಅನಿಸಿಕೆ ವ್ಯಕ್ತಪಡಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…