ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಬಂಟ್ವಾಳ ತಾಲೂಕು ಸ್ವೀಪ್ ಸಮಿತಿ ಆಶ್ರಯದಲ್ಲಿ ತಾಲೂಕಿನ ವಿವಿಧೆಡೆ ಪುನರ್ವಸತಿ ಕಾರ್ಯಕರ್ತರಾಗಿ ಕೆಲಸ ಮಾಡುವ ಸುಮಾರು 62 ಮಂದಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ತಾಲೂಕು ಕಚೇರಿಯಿಂದ ಹೊರಟ ಜಾಗೃತಿ ಜಾಥಾ ಬಿ.ಸಿರೋಡ್ ಪೇಟೆಯ ಮೂಲಕ ಸಾಗಿ ಬಂಟ್ವಾಳ ತಾಲೂಕು ಪಂಚಾಯತ್ ವಠಾರದಲ್ಲಿ ಸಮಾಪನಗೊಂಡಿತು. ಸಮಾಪನ ಕಾರ್ಯಕ್ರದಲ್ಲಿ ನಿಷ್ಪಕ್ಷಪಾತ ಮತದಾನ ಹಾಗೂ ಯಾವುದೇ ಆಮಿಷಗಳಿಗೆ ಬಲಿಯಾಗದೇ ಸ್ವತಂತ್ರವಾಗಿ ನೀವು ಹಾಗೂ ನಿಮ್ಮ ಮನೆಯವರೆಲ್ಲವರು ಮತದಾನ ಮಾಡುವಂತೆ ಬಂಟ್ವಾಳ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಅ. ಕಾಂಬಳೆ ತಿಳಿಸಿದರು. ಸಹಾಯಕ ನಿರ್ದೇಶಕರಾದ ವಿಶ್ವನಾಥ ಬಿ., ಹಾಗೂ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಉಪಸ್ಥಿತರಿದ್ದರು. ಸ್ವೀಪ್ ಸಮಿತಿಯ ತಾಲೂಕು ನೋಡಲ್ ಸುರೇಖಾ ಯಾಳವಾರ ಮಾಹಿತಿ ನೀಡಿ, ಪ್ರಮಾಣ ವಚನ ಬೋಧಿಸಿ, ನಿರೂಪಣೆ ಮಾಡಿದರು. ತಾಲೂಕು ಪಂಚಾಯಿತಿ ಪ್ರಭಾರ ವ್ಯವಸ್ಥಾಪಕ ಪ್ರಕಾಶ್, ಸಿಬ್ಬಂದಿ ಪ್ರಕಾಶ್, ಅಶೋಕ್, ಐಇಸಿ ಸಂಯೋಜಕ ರಾಜೇಶ್, ಸ್ವೀಪ್ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಪಾತೂರು, ಪ್ರಶಾಂತ್, ಅಶೋಕ್ ಕುಮಾರ್, ರಾಜೇಶ್ ಉಪಸ್ಥಿತರಿದ್ದರು. ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತರಾದ ಗಿರೀಶ್, ಜಗದೀಶ್, ದೀಪಾ ಪಡಿಯಾರ್ ಸಹಕರಿಸಿದರು.