ಬಂಟ್ವಾಳ: ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆಯಾಗಿ ಪ್ರಮೀಳ ಮಾಣೂರು( ಸಾಯಿಪ್ರಿಯ) ಆಯ್ಕೆಯಾಗಿದ್ದಾರೆ. ಶ್ರೀ ಸಾಯಿ ಶಕ್ತಿ ಚಾರೀಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಬಂಟ್ವಾಳದ ಸಂಸ್ಥಾಪಕಿಯಾಗಿರುವ ಇವರು ಹಲವಾರು ಜಾನಪದ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಮೇಶ್ ಮೆಲ್ಕಾರ್ ಪ್ರಧಾನ ಕಾರ್ಯದರ್ಶಿ, ಬಬಿತ ಎಸ್.ಎಮ್. ಕೋಶಾಧಿಕಾರಿ, ಲಕ್ಷ್ಮೀ ಯಶವಂತ ಶೆಟ್ಟಿ ತುಂಬೆ ಜತೆ ಕಾರ್ಯದರ್ಶಿ, ಪ್ರತಿಭಾ ಪಿ.ಶೆಟ್ಟಿ ಮತ್ತು ಕೃಷ್ಣ ಕುಲಾಲ್ ನರಿಕೊಂಬು ಉಪಾಧ್ಯಕ್ಷರು, ಸದಾಶಿವ ಡಿ.ತುಂಬೆ, ರೋಶನ್ ರೈ, ಸುಧಾಕರ ತುಂಬೆ, ಅನಿಲ್ ಪಂಡಿತ್, ಗೋಪಾಲ ಅಂಚನ್ ಗೌರವ ಸಲಹೆಗಾರರು, ಮನೋಜ್ ಕನಪಾಡಿ ಮತ್ತು ಪ್ರಶಾಂತ್ ಕನಪಾಡಿ ಸಂಚಾಲಕರು, ಚಂದ್ರಹಾಸ ಕಡೆಗೋಳಿ, ರಾಜೇಶ್ ಆಚಾರ್ಯ, ದಿನೇಶ್ ಅಮೀನ್ ಸಂಘಟನಾ ಕಾರ್ಯದರ್ಶಿಗಳು, ಎಚ್ಕೆ.ನಯನಾಡು, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರಸಾದ್ ಬಂಟ್ವಾಳ ಸಾಂಸ್ಕ್ರತಿಕ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಏಪ್ರಿಲ್ 7ರಂದು ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ.
ಅಪರಾಹ್ನ 3 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ರಾಮ್ ಭಟ್ ದೀಪ ಪ್ರಜ್ವಲಿಸುವರು. ಉದ್ಯಮಿ ರಘುನಾಥ ಸೋಮಯಾಜಿ ಉದ್ಘಾಟಿಸುವರು. ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ತಾರಾನಾಥ ಶೆಟ್ಟಿ ಬೋಳಾರ, ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅತಿಥಿಗಳಾಗಿ ಭಾಗವಹಿಸುವರು ಎಂದು ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಾಣೂರು( ಸಾಯಿಪ್ರಿಯ) ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ್ ಮೆಲ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ