ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಜನರ ಜನಪ್ರತಿನಿಧಿಯಾಗಿ ಆಯ್ಕೆಯಾಗಬೇಕು, ನಾಲ್ಕು ಲಕ್ಷ ಗಿಂತಲೂ ಅಧಿಕ ಅಂತರದಿಂದ ಗೆಲುವು ಸಾಧಿಸಿಬೇಕು ಎಂಬ ಆಸೆ ಕಾರ್ಯಕರ್ತರಲ್ಲಿದೆ ಎಂದರು.
ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಬಿಜೆಪಿ ಪ್ರಮುಖರಾದ ಜಗದೀಶ್ ಶೇಣವ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಹರಿಕೃಷ್ಣ ಬಂಟ್ವಾಳ್, ದೀರಜ್ ಬಲ್ಲೆಕೋಡಿ, ಗಣೇಶ್ ರೈ ಮಾಣಿ,ಸುದರ್ಶನ ಬಜ, ರವೀಶ್ ಶೆಟ್ಟಿ ಕರ್ಕಳ, ಬಿ.ಕೆ.ಅಣ್ಣು ಪೂಜಾರಿ, ಸುಲೋಚನ ಜಿ.ಕೆ.ಭಟ್, ಸಂಪತ್ ಕುಮಾರ್ ಕಡೇಶಿವಾಲಯ,ಲಖಿತಾ ಆರ್ ಶೆಟ್ಟಿ, ರತ್ನಾಕರ್ ರೈ, ಹಿರಿಯರಾದ ಡಾ.ಕಮಲಾ ಪ್ರಭಾಕರ್ ಭಟ್, ಲಕ್ಮೀ ರಘುರಾಜ್, ಕ.ಕೃಷ್ಣಪ್ಪ ಕಲ್ಲಡ್ಕ, ಸುಜಿತ್ ಕೊಟ್ಟಾರಿ, ಸತೀಶ್ ಶಿವಗಿರಿ, ವಾಸದೇವ ಪ್ರಭು, ನಾಗೇಶ್ ಕಲ್ಲಡ್ಕ ಕುಶಲ ಚೆಂಡೆ, ಗುರುವಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.