ಬಂಟ್ವಾಳ

ಹಿಂದೂ ಜನಜಾಗೃತಿ ಸಮಿತಿಯಿಂದ ವಿಶೇಷ ಅಭಿಯಾನ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಜಿರೆ ಪುತ್ತೂರು, ಸುಳ್ಯ ಭಾಗಗಳಲ್ಲಿ ಬ್ರಹ್ಮಧ್ವಜದ ಸ್ಥಾಪನೆ ಹಾಗೂ ಶಾಸ್ತ್ರಾನುಸಾರ ಯುಗಾದಿ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.

ಜಾಹೀರಾತು

ಯುಗಾದಿಯೆಂದರೆ ಹಿಂದುಗಳ ನವ ವರ್ಷ ಆರಂಭದ ದಿನ ಮತ್ತು ಸೃಷ್ಟಿಯ ಆರಂಭ ದಿನ. ಈ ದಿನದಂದು ಬ್ರಹ್ಮಾಂಡದಲ್ಲಿನ ಪ್ರಜಾಪತಿ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ. ಯುಗಾದಿ ಹಬ್ಬದಂದು ಬ್ರಹ್ಮಧ್ವಜವನ್ನು ಸ್ಥಾಪನೆ ಮಾಡುವುದು ಮುಖ್ಯ ಆಚರಣೆ ಆಗಿದೆ .ಈ ನಿಟ್ಟಿನಲ್ಲಿ ಈ ಪ್ರಾತ್ಯಕ್ಷಿಕೆ  ಮಾಡಿ ತೋರಿಸಲಾಯಿತು.

ಜಾಹೀರಾತು

ದೊಡ್ಡ ಬಿದಿರಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಕಣವನ್ನು ಕಟ್ಟಿ ಅದರ ಮೇಲೆ ಸಕ್ಕರೆಯ ದಂಟು, ಬೇವಿನ ಚಿಗುರೆಲೆ, ಮಾವಿನ ಎಲೆ, ಕೆಂಪು ಹೂಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಸಿಂಗರಿಸಿ ಕೆಳಗಡೆ ಮಣೆಯ ಮೇಲೆ ರಂಗೋಲಿ ಬಿಡಿಸಿ ನಿಲ್ಲಿಸಬೇಕು. ಇದಕ್ಕೆ ‘ಬ್ರಹ್ಮ ಧ್ವಜಾಯ ನಮಃ ‘ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮದೇವನು ಈ ದಿನ ಸೃಷ್ಟಿಯನ್ನು ನಿರ್ಮಿಸಿದ ಕಾರಣ ಧರ್ಮಶಾಸ್ತ್ರದಲ್ಲಿ ಈ ದ್ವಜವನ್ನು ಬ್ರಹ್ಮ ಧ್ವಜ ಎಂದು ಕರೆಯಲಾಗಿದೆ. ಬ್ರಹ್ಮ ಧ್ವಜದಿಂದ  ವಾತಾವರಣದಲ್ಲಿನ ಪ್ರಜಾಪತಿ ಲಹರಿಗಳು ಕಲಶದಿಂದ ಮನೆಯಲ್ಲಿ ಪ್ರವೇಶಿಸುತ್ತವೆ. ಮರು ದಿನದಿಂದ ಈ ಕಳಶದಲ್ಲಿನ ನೀರು ಕುಡಿಯಲು ತೆಗೆದುಕೊಳ್ಳಬೇಕು. ಬ್ರಹ್ಮ ಧ್ವಜದ ಪೂಜೆಯಿಂದ ಪ್ರಜಾಪತಿ ಲಹರಿಗಳಿಂದ ಪೂಜಕನಿಗೆ ಮತ್ತು ಅವನ ಕುಟುಂಬದವರಿಗೆ ಲಾಭವಾಗುತ್ತದೆ.  ಹಿಂದೂಗಳು ಈ ಹಬ್ಬವನ್ನು ಒಟ್ಟಿಗೆ ಸೇರಿ ಆಚರಿಸಿದರೆ ಅದರಿಂದ ಹಿಂದೂ ಸಂಘಟನೆ ಮತ್ತು ಸಂಸ್ಕೃತಿಯ ರಕ್ಷಣೆಯಾಗುತ್ತದೆ. ಯಾವ ಭಾವದಿಂದ ಬ್ರಹ್ಮ ಧ್ವಜದ ಪೂಜೆಯನ್ನು ಮಾಡಲಾಗುತ್ತದೆಯೋ, ಅದೇ ಭಾವದಿಂದ ಬ್ರಹ್ಮಧ್ವಜವನ್ನು ಸೂರ್ಯಾಸ್ತದ ನಂತರ ತಕ್ಷಣ ಕೆಳಗೆ ಇಳಿಸಬೇಕು, ಬ್ರಹ್ಮಧ್ವಜಕ್ಕೆ ಹಾಕಿದ ಎಲ್ಲಾ ಸಾಹಿತ್ಯಗಳನ್ನು ದೈನಂದಿನದಲ್ಲಿ ಬಳಸುವ ವಸ್ತುಗಳ ಹತ್ತಿರ ಇಡಬೇಕು. ಬ್ರಹ್ಮಧ್ವಜಕ್ಕೆ ಅರ್ಪಿಸಿದ ಹೂಗಳು ಮತ್ತು ಮಾವಿನ ಎಲೆಗಳನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಈ ರೀತಿಯಾಗಿ ನಾವು ಯುಗಾದಿ ಹಬ್ಬದಂದು ಬ್ರಹ್ಮಧ್ವಜವನ್ನು ಏರಿಸಿ ಶಾಸ್ತ್ರಾನುಸಾರ ವಾಗಿ ಆಚರಣೆ ಮಾಡಿದರೆ ನಮಗೆ ಯುಗಾದಿ ಹಬ್ಬದ ಸಂಪೂರ್ಣ ಲಾಭವು ದೊರಕುತ್ತದೆ ಎಂಬುದಾಗಿ ತಿಳಿಸಲಾಯಿತು. ಸುಮಾರು 300 ರ ಕ್ಕಿಂತಲೂ ಹೆಚ್ಚು ಮಂದಿ ಇದರ ಲಾಭ ಪಡೆದುಕೊಂಡರು ಎಂದು ಸಮನ್ವಯಕಾರ ವಿಜಯಕುಮಾರ್ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ