ಹೆಚ್ಚಿನ ಮಾಹಿತಿಗೆ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಂಪರ್ಕಿಸಬಹುದು.
ಶಂಭೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ರಚನಾ ಪ್ರೇರಣಾ ಕಮ್ಮಟ ನಡೆಯಿತು.
ಶಾಲಾ ಎಸ್. ಡಿ .ಎಂ.ಸಿ ಅಧ್ಯಕ್ಷ ನಾಗರಾಜ್ ಉದ್ಘಾಟಿಸಿ ಶುಭ ಹಾರೈಸಿದರು. ಭಾಷಣ ಕಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಮಾಹಿತಿ ನೀಡಿದರು. ಮಕ್ಕಳ ಕಲಾಲೋಕದ ಗೌರವ ಸಲಹೆಗಾರರಾದ ಭಾಸ್ಕರ ಅಡ್ವಳ ಕವನ, ಕಥೆ, ಚುಟುಕು ರಚನೆ ಬಗ್ಗೆ ತರಬೇತಿ ನೀಡಿದರು. ಎಸ್.ಡಿ.ಎಂ.ಸಿ.ಸದಸ್ಯರಾದ ವಿಶಾಲಾಕ್ಷಿ, ಮುಖ್ಯ ಶಿಕ್ಷಕ ಜಯರಾಮ ಪಡ್ರೆ, ಶಿಕ್ಷಕಿಯರಾದ ದಯಾವತಿ, ಇಂದಿರಾ, ಗಾಯತ್ರಿ, ಮೀನಾಕ್ಷಿ ಮತ್ತು ಉಷಾ ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)