ಪ್ರಮುಖ ಸುದ್ದಿಗಳು

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಸಿಂಧೂರ: ಪ್ರತಿಭಾನ್ವಿತೆಯ ವಿವರ ಹೀಗಿದೆ

 ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಸಿಂಧೂರ ರಾಜ ಎಂಬ ಬಾಲಕಿ ಫ್ಯೂಚರ್ ಪೋರ್ಟ್ ಯೂತ್-2023  ಚೆಕ್ ರಿಪಬ್ಲಿಕ್ ಆಯೋಜಿಸಿದ್ದ 2023ನೇ ಸಾಲಿನ “ಮಾನವ ಸಮಾಜಕ್ಕೆ ವರದಾನವಾಗಲಿರುವ ಆವಿಷ್ಕಾರಗಳು” ಎಂಬ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಇದರೊಂದಿಗೆ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆಯಲಿರುವ “ವರ್ಲ್ಡ್ ಸೈನ್ಸ್ ಸ್ಕಾಲರ್ಸ್” ಫೆಸ್ಟಿವಲ್ ನಲ್ಲಿ ಭಾಗವಹಿಸಲು ಆಕೆಯನ್ನು ಆಹ್ವಾನಿಸಲಾಗಿದೆ. ಸಿಂಧೂರ ಅವರಿಗೆ ಪ್ರಥಮ ಬಹುಮಾನ 1ಲಕ್ಷದ 77 ಸಾವಿರ ನಗದು ದೊರೆತಿದೆ ಎಂದು ಸಿಂಧೂರ ಅವರ ತಾಯಿ ಶಿಬಾನಿ ರಾಜ ಹೇಳಿದ್ದಾರೆ.


ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಉಳ್ಳಾಲದ ಮೊಗವೀರ ಮುಖಂಡ ಬಾಬು ಬಂಗೇರ ಹಾಗೂ ಶಶಿಕಾಂತಿ ದಂಪತಿಯ ಮೊಮ್ಮಗಳಾಗಿರುವ ಸಿಂಧೂರ ಬೆಂಗಳೂರಿನ ನ್ಯೂ ಹೊರೈಝನ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ.ಸಿಂಧೂರ ಬಾಲ್ಯದಲ್ಲೇ ಟಿ.ವಿ ನೋಡುವುದು ಕಡಿಮೆ,ಚಿತ್ರಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು,ಆಕೆಗೆ ಸ್ಮರಣಶಕ್ತಿ ಜಾಸ್ತಿಯಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರದ ಕುರಿತು ಆಸಕ್ತಿ ಹೊಂದಿದ್ದ ಸಿಂಧೂರ ಕೊರೊನಾ ಸಂದರ್ಭ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ಮೂಲಕ ಅದರ ಬಗ್ಗೆ ಅಧ್ಯಯನ ನಡೆಸಿದ್ದಳು.

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 19 ದೇಶದ 33 ಆವಿಷ್ಕಾರಗಳನ್ನು ಕೊನೆಯ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು.ಇದರಲ್ಲಿ ಸಿಂಧೂರ ರಾಜ ಮಂಡಿಸಿದ್ದ “ಆರ್ಟಿಫಿಷಿಯಲ್
ಇಂಟೆಲಿಜೆಂಟ್ಸ್ ಮಾಡೆಲ್ ಸಿ ಬಿ ಫ್ಲೋ” ಆವಿಷ್ಕಾರವು ಪ್ರಥಮ ಸ್ಥಾನ ಪಡೆದಿದೆ.ಈ ಆವಿಷ್ಕಾರವು ಮನುಷ್ಯನ ಮೆದುಳಿನ ಪ್ರಾಯವನ್ನು ಲೆಕ್ಕ ಹಾಕಿಡಿಮೆನ್ಸಿಯಾ, ಆಲ್ಝೈಮರ್ ಮುಂತಾದ ನ್ಯೂರೋ ಡಿ ಜನರೇಟಿವ್ ಕಾಯಿಲೆಗಳು ಬರುವಸಾಧ್ಯತೆಯನ್ನು ಅಂದಾಜಿಸುತ್ತದೆ.ಸಿಂಧೂರ “ವರ್ಲ್ಡ್ ಸೈನ್ಸ್ ಸ್ಕಾಲರ್ 2023″ ಆಗಿ ಆಯ್ಕೆಯಾಗಿ 2024 ಮೇ 29 ರಿಂದ ಜೂನ್2ರವರೆಗೆ ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೆಸ್ಟಿವಲ್‌ನಲ್ಲಿಭಾಗವಹಿಸಲಿದ್ದಾರೆ. 22 ದೇಶಗಳ ಒಟ್ಟು 52 ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆತಿದೆ. ಅಲ್ಲಿಇವರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳ ಜೊತೆ ವಿಚಾರ ವಿನಿಮಯ ನಡೆಸಲಿದ್ದಾರೆ ಎಂದು ಶಿಬಾನಿ ಹೇಳಿದರು.ಸಿಂಧೂರ ಅವರು “ಯುರೋಪಿಯನ್ ಮೆತೆಮ್ಯಾಟಿಕಲ್ ಸೊಸೈಟಿ” ಹಾಗೂ “ಕ್ಯಾಂಪ್‌ ಯೆಲ್ಲೋ” ಇವರು ನಡೆಸಿದ 2022ನೇ ಸಾಲಿನ ಅಂತರಾಷ್ಟ್ರೀಯ ಮೆತೆಮ್ಯಾಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಕಂಚಿನ ಪದಕ
ಪಡೆದಿದ್ದಾರೆ.“ಸ್ಟೆಮ್ ಪೀಡಿಯಾ” ಇವರು ನಡೆಸಿದ “ಕೋಡೆವಾರ್” 2022 ಇಂಟರ್ ನ್ಯಾಶನಲ್
ಸ್ಪರ್ಧೆಯಲ್ಲಿ “ಪೀಪಲ್ ಚಾಯ್ಸ್” ಅವಾರ್ಡನ್ನು ಪಡೆದಿದ್ದಾರೆ.ಸಿಂಧೂರ ಮಾಡಿರುವ ಪ್ರೋಜೆಕ್ಟ್ X-Ray, MRI – Scan ಗಳಲ್ಲಿ ಕಂಡುಬರುವ ಗೆಡ್ಡೆಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದನ್ನು ಶೇಕಡಾ 95 ರಿಂದ 98 ಪರ್ಸೆಂಟ್‌ವರೆಗೆ ನಿಖರವಾಗಿ ತಿಳಿಸುತ್ತದೆ.ಇದುವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿನಿ ಸಿಂಧೂರ ಮಾತನಾಡಿ, ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯವಾಗಿದೆ. ಕೊರೊನಾ ಸಂದರ್ಭ ಆಳವಾಗಿ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರ ತಿಳಿದು ಯಶಸ್ಸು ಸಾಧ್ಯವಾಗಿದೆ, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ಹೊಂದಿದ್ದು, ಹುಟ್ಟಿ ಬೆಳೆದ ಉಳ್ಳಾಲವನ್ನು ಮರೆಯದೇ ದೇಶದ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಬಹುತೇಕ ಸವಾಲುಗಳಿಗೆ ಉತ್ತರವಾಗಲು ಪ್ರಯತ್ನಿಸುವೆನು ಎಂದರು.ಈ ಸಂದರ್ಭ ಸಿಂಧೂರ ತಂದೆ ರಾಜಾ ದಯಾಳನ್, ಅಜ್ಜ ಬಾಬು ಬಂಗೇರ,ಅಜ್ಜಿ ಶಶಿಕಾಂತಿ ಉಳ್ಳಾಲ್ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ