ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್ ಅನ್ನು ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಪ್ರಧಾನ ಗುರುಗಳಾಗಿ ವಂ. ಜೇಸನ್ ಮೊನಿಸ್, ಚರ್ಚ್ ಧರ್ಮಗುರುಗಳಾದ ವಂ. ಸ್ವಾಮಿ ಫ್ರಾನ್ಸಿಸ್ ಕ್ರಾಸ್ತಾ ಬಲಿಪೂಜೆ ಅರ್ಪಿಸಿದರು.
ಚರ್ಚ್ ಧರ್ಮಗುರುಗಳಾದ ವಂ.ಫ್ರ್ರಾನ್ಸಿಸ್ ಕ್ರಾಸ್ತಾ ಯೇಸು ಕ್ರಿಸ್ತರ ಪುನರುತ್ಥಾನದ ಮಹತ್ವದ ಬಗ್ಗೆ ಪ್ರವಚನ ನೀಡಿದರು.
ಪವಿತ್ರ ವಾರದ ಎಲ್ಲಾ ಪ್ರಾರ್ಥನಾ ವಿಧಿಗಳಿಗೆ ಚರ್ಚ್ ಪಾಲನಾ ಮಂಡಳಿ ಮೇಲುಸ್ತುವಾರಿ ವಹಿಸಿತ್ತು. ಚರ್ಚ್ ಆವರಣದಲ್ಲಿ ದೊಡ್ಡ ಎಲ್ ಇ ಡಿ ಪರದೆ ಅಳವಡಿಸಲಾಗಿತ್ತು. ಸಂಭ್ರಮಾಚರಣೆಗೆ ಸಹಕರಿಸಿದ ಕೊಡುಗೈ ದಾನಿಗಳನ್ನು ಧರ್ಮಗುರುಗಳು ಮೇಣದ ಬತ್ತಿಗಳನ್ನು ನೀಡಿ ಗೌರವಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…