ಮಗು ಮಲಗಿದೆ, ಜೋರಾಗಿ ಮಾತನಾಡಬೇಡಿ ಎಂದದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ರಮೇಶ್ ಹಾಗೂ ಅವರ ಪತ್ನಿ ಸಣ್ಣ ಮಗನೊಂದಿಗೆ ಬಳ್ಪದಲ್ಲಿ ವಾಸವಾಗಿದ್ದು, ಸಂಜೆ ಮನೆಯಲ್ಲಿರುವಾಗ ಅವರ ಸಂಬಂಧಿ ಸುಂದರ ಹೊಸ್ಮಠ ಅವರು ಮನೆಗೆ ಬಂದಿದ್ದು, ಕುಳಿತುಕೊಂಡು ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ರಮೇಶ್ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಸುಂದರ ಅವರು ಕತ್ತಿಯಿಂದ ರಮೇಶ್ ಅವರಿಗೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ರಮೇಶ್ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.