ಬಂಟ್ವಾಳ: ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಆವರಣದಲ್ಲಿ ಆಯೋಜಿಸಿದ 15ನೇ ವರ್ಷದ ಯಕ್ಷಗಾನ ಪ್ರದರ್ಶನದ ವೇಳೆ ಹಿರಿಯ ಕಲಾವಿದ ದಿವಾಕರ ರೈ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ದುಡಿದ ಹಿನ್ನೆಲೆಯಲ್ಲಿ ದೊರಕಿದ ಈ ಸನ್ಮಾನದಿಂದಾಗಿ ತನ್ನ ಹೊಣೆಗಾರಿಕೆ ಇನ್ನಷ್ಟು ಜಾಸ್ತಿಯಾಗಿದೆ ಎಂದು ಈ ಸಂದರ್ಭ ದಿವಾಕರ ರೈ ಹೇಳಿದರು.
ಸನ್ಮಾನ ನೆರವೇರಿಸಿ ಮಾತನಾಡಿದ ಚಂದ್ರಹಾಸ ರೈ ಬಾಲಾಜಿಬೈಲು, ಸಂಘಟಕರು ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಉಲ್ಲೇಖನೀಯ. ತನ್ನನ್ನು ತಾವೇ ಸನ್ಮಾನಿಸಿಕೊಳ್ಳುವ ಪ್ರವೃತಿ ಹೆಚ್ಚಾಗುತ್ತಿರುವ ವೇಳೆ ಇಂದು ನಿಜವಾದ ಸನ್ಮಾನ ನಡೆದಿದ್ದು, ಅಭಿನಂದನೀಯ ಎಂದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ ಭಟ್ಟ ಶುಭ ಹಾರೈಸಿದರು. ಯಕ್ಷಮಿತ್ರರು ಕೈಕಂಬದ ಪ್ರಮುಖರಾದ ಸದಾನಂದ ಶೆಟ್ಟಿ ರಂಗೋಲಿ, ಶಂಕರ ಶೆಟ್ಟಿ ಪರಾರಿಗುತ್ತು, ಭುಜಂಗ ಸಾಲಿಯನ್, ಸದಾಶಿವ ಕೈಕಂಬ, ವಿಶ್ವನಾಥ, ಹನುಮಗಿರಿ ಮೇಳದ ಪ್ರಬಂಧಕ, ಕಲಾವಿದ ಹರೀಶ್ ಬಳಂತಿಮೊಗರು ಉಪಸ್ಥಿತರಿದ್ದರು. ಕಿಶೋರ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಹನುಮಗಿರಿ ಮೇಳದವರಿಂದ ನಮೋ ರಘುವಂಶ ದೀಪ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು