ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ಗುಬ್ಬಚ್ಚಿಗೂಡು ರಮ್ಯನಿತ್ಯಾನಂದ ಶೆಟ್ಟಿ ಬರೆದಿರುವ ಕಂಬಳ ಲೋಕ ಭಾಗ-2 ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ.ವಿ ಹೆಗ್ಗಡೆ ದಂಪತಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಪುಸ್ತಕದಲ್ಲಿ ಕೋಣಗಳ ಮಾಲಕರು, ಓಟಗಾರರು, ಕಂಬಳ ಛಾಯಾಗ್ರಾಹಕರು, ಉದ್ಘೋಷಕರು, ಕೋಣಗಳನ್ನು ಬಿಡಿಸುವವರು, ಅಲಂಕಾರಿಕ ಪರಿಕರಗಳನ್ನು ತಯಾರಿಸುವವರು ಹಾಗೂ ಕಂಬಳ ಕೂಟಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರ ಯಶೋಗಾಥೆಯನ್ನು ಬರೆಯಲಾಗಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…