ಬಿ.ಸಿ.ರೋಡ್ ನ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ರಚನೆಯಾಗಿದ್ದು, ಅಧ್ಯಕ್ಷರಾಗಿ ಪಿಡಬ್ಲ್ಯುಡಿ ಗುತ್ತಿಗೆದಾರ ಗಣೇಶ್ ಕಾಮಾಜೆ ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಭೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಡಾ. ರಮೇಶಾನಂದ ಸೋಮಯಾಜಿ, ಅಧ್ಯಕ್ಷರಾಗಿ ಗಣೇಶ್ ಕಾಮಾಜೆ, ಉಪಾಧ್ಯಕ್ಷರಾಗಿ ಗುರುದತ್ತ ಹೆಗ್ಡೆ, ಕಾರ್ಯದರ್ಶಿಯಾಗಿ ಕಿಶೋರ್ ಕುಲಾಲ್ ಆಯ್ಕೆಗೊಂಡರು. ಒಟ್ಟು 19 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭ ಸಂದೀಪ್ ಸಾಲ್ಯಾನ್, ಸತೀಶ್ ಕುಲಾಲ್ ಮತ್ತು ಕಿಶೋರ್ ಅವರು ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ಮಾಂಬಾಡಿ, ಸದಸ್ಯರಾದ ದೇವದಾಸ್, ಸಹಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ ಉಪಸ್ಥಿತರಿದ್ದರು.