ತುಳು, ಬ್ಯಾರಿ, ಕೊಂಕಣಿ, ಯಕ್ಷಗಾನ, ಸಾಹಿತ್ಯ, ಕೊಡವ, ಅರೆಭಾಷೆ, ಬಯಲಾಟ, ನೃತ್ಯ, ನಾಟಕ ಸೇರಿದಂತೆ 19 ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಡಾ. ಪುರುಷೋತ್ತಮ ಬಿಳಿಮಲೆ, ಡಾ.ಎಲ್.ಎನ್.ಮುಕುಂದರಾಜ್ ಸಹಿತ ಪ್ರಮುಖರು ಇದರಲ್ಲಿ ಸೇರಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪತ್ರಕರ್ತ ತಾರಾನಾಥ ಕಾಪಿಕಾಡ್ ನೇಮಕಗೊಂಡಿದ್ದಾರೆ. ಯಕ್ಷಗಾನ ಅಕಾಡೆಮಿಯಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಯಾರೂ ಇಲ್ಲದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷರಾಗಿದ್ದು, ಪ್ರೊ. ರಾಮಚಂದ್ರಪ್ಪ, ಡಾ.ವಿ.ಪಿ.ನಿರಂಜನಾರಾಧ್ಯ, ಟಿ.ಗುರುರಾಜ್, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಣ್ಣ ಕಲ್ಲೂರು ಸದಸ್ಯರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಅಧ್ಯಕ್ಷರಾಗಿ ಡಾ. ಚನ್ನಪ್ಪ ಕಟ್ಟಿ, ಸದಸ್ಯರಾಗಿ ಡಾ.ಎಂ.ಎಸ್.ಶೇಖರ್, ವಿಜಯಲಕ್ಷ್ಮೀ ಗೌಟಗಿ, ನಾರಾಯಣ ಹೊಡಘಟ್ಟ, ಶಾಕಿರಾ ಬಾನು, ಡಾ. ಪಿ.ಭಾರತಿದೇವಿ, ಡಾ.ಎಸ್.ಗಂಗಾಧರಯ್ಯ, ಡಾ. ಕರಿಯಪ್ಪ ಮಾಳಗಿ, ಡಾ.ಚಿತ್ತಯ್ಯ ಪೂಜಾರ, ಡಾ. ಜಾಜಿ ದೇವೇಂದ್ರಪ್ಪ ಸದಸ್ಯರಾಗಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ: ಅಧ್ಯಕ್ಷರಾಗಿ ಮಾನಸ, ಸದಸ್ಯರಾಗಿ ಡಾ. ಲಕ್ಷ್ಮಣ ಕೊಡಸೆ, ಶರಣಪ್ಪ ಬಸಪ್ಪ ಕೊಲ್ಕಾರ್, ಕುಶಾಲ ಬರಗೂರು, ಎಚ್.ಬಿ.ನೀರಗುಡಿ, ಅಕ್ಷತಾ ಹುಂಚದಕಟ್ಟೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ: ಸದಸ್ಯರಾಗಿ ಅಶೋಕ್ ಚಂದರಗಿ, ಡಾ. ಎಂ.ಎಸ್.ಮದಬಾವಿ, ಜಾಣಗೆರೆ ವೆಂಕಟರಾಮಯ್ಯ, ಭಗತ್ ರಾಜ್, ಎ.ಆರ್.ಸುಬ್ಬಯ್ಯಕಟ್ಟೆ, ಡಾ.ಸಂಜೀವಕುಮಾರ್ ಅತಿವಾಡೆ, ಶಿವರೆಡ್ಡಿ ಹಡೇದ.
ಕರ್ನಾಟಕ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಡಾ.ಎಲ್.ಎನ್.ಮುಕುಂದರಾಜ್, ಸದಸ್ಯರಾಗಿ ಸಿದ್ಧಪ್ಪ ಹೊನಕಲ್, ಅರ್ಜುನ ಗೋಳಸಂಗಿ, ಡಾ.ಎಚ್.ಜಯಪ್ರಕಾಶ ಶೆಟ್ಟಿ, ಡಾ.ಚಂದ್ರಕಲಾ ಬಿದರಿ, ಡಾ.ಚಿಲಕ್ ರಾಗಿ, ಡಾ.ಗಣೇಶ್, ಸುಮಾ ಸತೀಶ್, ಎಚ್.ಆರ್.ಸುಜಾತ, ಅಕ್ಕೈ ಪದ್ಮಶಾಲಿ, ಪಿ.ಚಂದ್ರಿಕಾ, ಪ್ರಕಾಶರಾಜ ಮೇಹು, ಮಲ್ಲಿಕಾರ್ಜುನ ಮಾನ್ಪಡೆ, ಅಜ್ಮೀರ್ ನಂದಾಪುರ, ಚಂದ್ರಕಿರಣ, ಮಹದೇವ ಬಸರಕೋಡ ಸದಸ್ಯರು.
ಕರ್ನಾಟಕ ನಾಟಕ ಅಕಾಡೆಮಿ: ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷರು. ಸದಸ್ಯರಾಗಿ ಜೇವರ್ಗಿ ರಾಜಣ್ಣ, ಜಿಪಿಒ ಚಂದ್ರು, ಅಮಾಸ, ಮಾಲೂರು ವಿಜಿ, ಷಾಹಿ ಜಾಹಿದಾ, ಎಸ್. ರಾಮು, ಜ್ಯೋತಿ ಮಂಗಳೂರು, ಗೀತಾ ಸಿದ್ಧಿ, ಬಾಬು ವಿ ಕುಂಬಾರ, ಗಾಯತ್ರಿ ಹಡಪದ, ಲವಕುಮಾರ, ಕೆ.ಎ.ಬನಹಟ್ಟಿ, ಉಗಮ ಶ್ರೀನಿವಾಸ, ಬಾಬಾ ಸಾಹೇಬ ಕಾಂಬ್ಳೆ, ಚಾಂದ್ ಪಾಷಾ ಬಾಬುಸಾಬ್ ಕಿಲ್ಲೇದಾರ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ: ಅಧ್ಯಕ್ಷರಾಗಿ ಡಾ. ಕೃಪಾ ಫಡ್ಕಿ. ಸದಸ್ಯರಾಗಿ ವಿದ್ವಾನ್ ವೆಂಕಟರಾಘವನ್, ಖಾಸಿಂ ಮಲ್ಲಿಗೆಮಾಡು, ಬಿ.ವಿ.ಶ್ರೀನಿವಾಸ್, ರಮೇಶ್ ಗಬ್ಬೂರು, ಸತ್ಯವತಿ ರಾಮನಾಥ, ಸವೀತಾ ಅಮರೇಶ ನುಗಡೋಣಿ, ಹರಿದೋಗ್ರ, ಬಸಪ್ಪ ಎಚ್. ಭಜಂತ್ರಿ, ಡಾ. ಗೀತಾ, ಉಷಾ, ನಿರ್ಮಲಾ, ಶಂಕರ ಹೂಗಾರ, ಡಾ. ಮೃತ್ಯುಂಜಯ ದೊಡ್ಡವಾಡ, ಹುಸೇನ್ ಸಾಬನ್, ಪದ ದೇವರಾಜ್.
ಕರ್ನಾಟಕ ಶಿಲ್ಪಕಲಾ ಅಕಾಡಮಿ: ಎಂ.ಸಿ.ರಮೇಶ್ ಅಧ್ಯಕ್ಷರಾಗಿ ಆಯ್ಕೆ. ಸದಸ್ಯರಾಗಿ ರಾಮಮೂರ್ತಿ, ಬಸಮ್ಮ ನರಗುಂದ, ಹರೀಶ್ ಮಾಳಪ್ಪನವರ್, ಬಿ.ಸಿ.ಶಿವಕುಮಾರ್, ನಾಗರಾಜ ಶಿಲ್ಪಿ, ವಿಶಾಲ್, ಹನುಮಂತ ಬಾಡದ, ಗೋಪಾಲ ಕಮ್ಮಾರ, ಭಾರತಿ ಸಂಕಣ್ಣಾಚಾರ್, ವೈ.ಕುಮಾರ
ಕರ್ನಾಟಕ ಲಲಿತಕಲಾ ಅಕಾಡೆಮಿ: ಅಧ್ಯಕ್ಷರಾಗಿ ಡಾ. ಪ.ಸ.ಕುಮಾರ್, ಸದಸ್ಯರಾಗಿ ಬಸವರಾಜ್ ಎಸ್. ಜಾನೆ, ರಾ.ಸೂರಿ, ಕರಿಯಪ್ಪ ಹಂಚಿನಮನಿ, ಮನು ಚಕ್ರವರ್ತಿ, ಪಿ.ಮಹಮ್ಮದ್, ಶಾಂತಾ ಕೊಳ್ಳಿ, ಅನಿತಾ ನಟರಾಜ ಹುಳಿಯಾರ, ಚಂದ್ರಕಾಂತ ಸರೋದೆ, ಬಸವರಾಜ ಕಲೆಗಾರ, ಆಶಾರಾಣಿ, ಮಹದೇವ ಶೆಟ್ಟಿ, ಫಾತಿಮಾ, ಆರ್. ಶಂಕರ್, ರಾಜೇಶ್ವರಿ ಮೋಪಗಾರ, ವೆಂಕಟೇಶ ಬಡಿಗೇರ ಸದಸ್ಯರು.
ಕರ್ನಾಟಕ ಯಕ್ಷಗಾನ ಅಕಾಡೆಮಿ: ಅಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ. ಸದಸ್ಯರಾಗಿ ರಾಘವ ಎಚ್, ಕೃಷ್ಣಪ್ಪ ಪೂಜಾರಿ, ಗುರುರಾಜ ಭಟ್, ವಿನಯಕುಮಾರ ಶೆಟ್ಟಿ, ವಿಜಯ ಕುಮಾರ ಶೆಟ್ಟಿ, ಮೋಹನ ಕೊಪ್ಪಾಳ್, ಸತೀಶ್ ಅಡಪ್ಪ ಸಂಕಬೈಲ್, ರಾಜೇಶ್ ಕಳ್ಳೈ, ದಯಾನಂದ ಪಿ, ಜಿ.ವಿ.ಎಸ್. ಉಳ್ಳಾಲ್.
ಕರ್ನಾಟಕ ಜಾನಪದ ಅಕಾಡೆಮಿ: ಅಧ್ಯಕ್ಷರಾಗಿ ಶಿವಪ್ರಸಾದ್ ಗೊಲ್ಲಹಳ್ಳಿ. ಸದಸ್ಯರಾಗಿ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಉಮೇಶ್, ಡಾ.ಜಮೀರುಲ್ ಷರೀಫ್, ಮಂಜುನಾಥ ರಾಮಣ್ಣ, ಸಂಕರಣ್ಣ ಸಂಗಣ್ಣನವರ್, ರಂಗಪ್ಪ ಮಾಸ್ತರ್, ಗುರುರಾಜ್, ಡಾ. ಕೆಂಪಮ್ಮ, ಡಾ. ಎಂ.ಎಂ.ಪಡಶೆಟ್ಟಿ, ದೇವಾನಂದ ವರಪ್ರಸಾದ್, ನಿಂಗಣ್ಣ ಮುದನೂರು, ಕೆಂಕೆರೆ ಮಲ್ಲಿಕಾರ್ಜುನ, ಜೀವನ್ ಸಾಬ್ ವಾಲಿಕಾರ್, ಶಿವಮೂರ್ತಿ ತನಿಖೆದಾರ್, ಮೆಹಬೂಬ್ ಸಾಬ್ ಕಿಲ್ಲೇದಾರ್.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ತಾರಾನಾಥ ಗಟ್ಟಿ ಕಾಪಿಕಾಡ್, ಸದಸ್ಯರಾಗಿ ಪೃಥ್ವೀರಾಜ್, ಕುಂಬ್ರ ದುರ್ಗಾಪ್ರಸಾದ ರೈ, ಮೋಹನದಾಸ ಕೊಟ್ಟಾರಿ, ಅಕ್ಷಯ ಆರ್ ಶೆಟ್ಟಿ, ಶೈಲೇಶ್ ಬಿನ್ ಬೋಜ ಸುವರ್ಣ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್. ಸದಸ್ಯರಾಗಿ ವಂ.ಪ್ರಕಾಶ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ಡಾ. ವಿಜಯಲಕ್ಷ್ಮೀ ನಾಯಕ್, ನವೀನ್ ಲೋಬೊ, ಸಪ್ನಾ ಮೆ ಕ್ರಾಸ್ತಾ, ಸಮರ್ಥ ಭಟ್, ಸುನಿಲ್ ಸಿದ್ದಿ, ಜೇಮ್ಸ್ ಲೋಪಿಸ್, ದಯಾನಂದ ಮುಡ್ನೇಕರ್, ಪ್ರಮೋದ್ ಪಿಂಟೊ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಉಮ್ಮರ್ ಯು.ಎಚ್. ಸದಸ್ಯರಾಗಿ ಬಿ.ಎಸ್. ಮೊಹಮದ್, ಹಫ್ತಾ ಬಾನು, ಸಾರಾ ಆಲಿ ಪರ್ಲಡ, ಶಮೀರಾ ಜಹಾನ್, ಯು.ಎಚ್.ಖಾಲಿದ್ ಉಜಿರ್, ತಾಜುದ್ದೀನ್. ಅಬುಬಕ್ಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್, ಅಮೀದ್ ಹಸನ್ ಮಾಡೂರು, ಶಮೀರ್ ಮೂಲ್ಕಿ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಸದಾನಂದ ಮಾವಜಿ. ಸದಸ್ಯರಾಗಿ ಚಂದ್ರಶೇಖರ ಪೇರಾಲು, ತೇಜಕುಮಾರ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ, ಡಾ.ಎನ್.ಎ.ಜ್ಞಾನೇಶ್.
ಕರ್ನಾಟಕ ಬಯಲಾಟ ಅಕಾಡೆಮಿ: ಅಧ್ಯಕ್ಷರಾಗಿ ಪ್ರೊ.ದುರ್ಗಾದಾಸ್. ಸದಸ್ಯರಾಗಿ ಬಿ.ಪರಶುರಾಮ್, ಅನಸೂಯ ವಡ್ಡರ್, ಚಂದ್ರು ಕಾಳೇನಹಳ್ಳಿ, ಭೀಮಪ್ಪ ರಾಮಪ್ಪ ಹುದ್ದಾರ್, ಮಲ್ಲಮ್ಮ ಸಾಲಹಳ್ಳಿ, ಮಾರನಾಯಕ, ಲಿಂಗಪ್ಪ ತೋರಣಗಟ್ಟಿ, ಯಲ್ಲಪ್ಪ ಮಾಸ್ತರ ನವಕಲ್, ಸುಜಾತ ಹಳಿಹಾಳ. ಡಿ.ಫಾಲಾಕ್ಷಯ್ಯ.
ಕರ್ನಾಟಕ ಬಂಜಾರ ಅಕಾಡೆಮಿ: ಡಾ. ಎ.ಆರ್.ಗೋವಿಂದಸ್ವಾಮಿ ಅಧ್ಯಕ್ಷರಾಗಿ ಆಯ್ಕೆ. ಸದಸ್ಯರಾಗಿ ಶಾಂತಾ ನಾಯಕ್ ಶಿರಗಾನಹಳ್ಳಿ, ಭಾರತಿಬಾಯಿ ಕೂಬ, ಪಳನಿಸ್ವಾಮಿ ಜಾಗೇರಿ, ಆರ್.ಬಿ.ನಾಯ್ಕ, ಶೇಖರಪ್ಪ ಹೇಮಲಪ್ಪ ಲಮಾಣಿ, ಡಾ.ರವಿನಾಯ್ಕ, ಸಾವಿತ್ರಿ ಬಾಯಿ, ಅಣ್ಣಾರಾಯ ರಾಥೋಡ್, ಸುರೇಖ ಲಮಾಣಿ, ಕುಮಾರ್ ರಾಥೋಡ್.
ರಂಗಸಮಾಜ: ಸದಸ್ಯರಾಗಿ ಡಾ. ರಾಮಕೃಷ್ಣಯ್ಯ, ಡಾ. ರಾಜಪ್ಪ ದಳವಾಯಿ, ಲಕ್ಷ್ಮೀ ಚಂದ್ರಶೇಖರ, ಶಶಿಧರ ಬಾರಿಘಾಟ್. ಡಿಂಗ್ರಿ ನರೇಶ್, ಮಹಂತೇಶ ಗಜೇಂದ್ರಗಡ, ಸುರೇಶ್ ಬಾಬಿ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಅಜ್ಜಿನಕೊಂಡ ಮಹೇಶ ನಾಚ್ಚಯ್ಯ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…