ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹಾಗೂ ಬಂಟ್ವಾಳ ಕೋಅಪರೇಟಿವ್ ಬ್ಯಾಂಕ್ ಸಿಇಒ ಆಗಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ, ಕಬಡ್ಡಿ ತೀರ್ಪುಗಾರ ಬೇಬಿ ಕುಂದರ್ ಅವರು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಗುತ್ತಾ ಬಂದರೂ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ ಆಗಿರಲಿಲ್ಲ. ಇದೀಗ ನೇಮಕಾತಿ ಪ್ರಕಟಗೊಂಡಿದ್ದು, ಬಿ.ಸಿ.ರೋಡ್ ಜೋಡುಮಾರ್ಗದ ಅಜ್ಜಿಬೆಟ್ಟು ನಿವಾಸಿಯಾಗಿರುವ ಬೇಬಿ ಕುಂದರ್ ಅಧ್ಯಕ್ಷರಾಗಿ, ಬಿ.ಕಸ್ಬಾ ಗ್ರಾಮದ ನೇರಂಬೋಳು ನಿವಾಸಿ ಮನೋಹರ ಕುಲಾಲ್ ನೇರಂಬೋಳ್, ಬಿ.ಮೂಡ ಗ್ರಾಮದ ಅಜ್ಜಿಬೆಟ್ಟಿನ ಹರೀಶ್, ಬಿ.ಮೂಡ ಗ್ರಾಮದ ಗೂಡಿನಬಳಿಯ ಅಬ್ದುಲ್ ರಝಾಕ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…