ಬಂಟ್ವಾಳ: ಚುನಾವಣಾ ವಾಹನವಾಗಿ ಬಳಸಲಾಗುವ ಟೂರಿಸ್ಟ್ ಕಾರು, ವ್ಯಾನುಗಳಿಗೆ ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭ ನೀಡಬೇಕಾಗಿದ್ದ ಬಾಡಿಗೆಯನ್ನು ಇನ್ನೂ ನೀಡಿಲ್ಲ ಎಂದು ಆರೋಪಿಸಿ ಬಂಟ್ವಾಳದ ಆಡಳಿತ ಸೌಧದ ಮುಂಭಾಗ ಟೂರಿಸ್ಟ್ ಕಾರು, ವ್ಯಾನು ಚಾಲಕ, ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಳಿಕ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ವ್ಯಾನು ಚಾಲಕ ಮಾಲೀಕರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಸದಾನಂದ ನಾವರ, ಈಗಾಗಲೇ ಹಲವು ಬಾರಿ ಮನವಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದೇವೆ. ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಮಾಡಿದರೆ, ಒತ್ತಾಯಪೂರ್ವಕವಾಗಿ ವಾಹನಗಳನ್ನು ಸೀಜ್ ಮಾಡಿದರೆ, ವಾಹನಗಳನ್ನು ಕಚೇರಿಯ ಬಳಿ ಇಟ್ಟು ನಾವು ಮರಳುತ್ತೇವೆ. ಈ ಬಾರಿ ವಾಹನಗಳನ್ನು ಬಾಡಿಗೆಗೆ ಪಡೆಯುವ ಸಂದರ್ಭ ಮೊದಲೇ ಎಷ್ಟು ಪಾವತಿ ಎಂಬುದನ್ನು ನಿಗದಿಪಡಿಸಿಕೊಳ್ಳಬೇಕು, ಇಲ್ಲವಾದರೆ ನಾವು ಮೋಸ ಹೋಗಬಹುದು ಎಂದರು.
ಈ ಬಾರಿ ಮೊದಲೇ ಪಾವತಿಯ ಗ್ಯಾರಂಟಿ ಕೊಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕಳೆದ 2023ರ ವಿಧಾನಸಭಾ ಚುನಾವಣೆಗೆ ವಿವಿಧ ಇಲಾಖೆಗಳಿಗೆ ನಮ್ಮ ಟೂರಿಸ್ಟ್ ವಾಹನಗಳಲ್ಲಿ ವಶಪಡಿಸಿ, ಸರಕಾರದ ಆದೇಶ ಪ್ರಕಾರ ಪಾವತಿ ನೀಡುವುದಾಗಿ ತಿಳಿಸಿದ್ದಾರೆ. ಕಾರಿಗೆ 2700 ರೂ, ವ್ಯಾನು 3800, ಮಿನಿಬ ಬಸ್ 8,200 ರೂ ನೀಡುವುದಾಗಿ ತಿಳಿಸಿದ್ದರು. ಆದರೆ ಹೇಳಿದ ಪ್ರಕಾರ, ಕಾರ್ಯನಿರ್ವಹಿಸಿದ ಎಲ್ಲ ಚಾಲಕರಿಗೆ ಬಾಡಿಗೆ ನೀಡದೆ ತೊಂದರೆ ಉಂಟುಮಾಡಿದೆ ಎಂದು ಆರೋಪಿಸಿದರು.
ಈ ಸಂದರ್ಭ ಟೂರಿಸ್ಟ್ ಕಾರು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ.ರೋಡ್, ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಸುನಿಲ್ ಲೋಬೊ, ವಿಠಲ ರೈ, ಸುರೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…