ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ಉತ್ಸವಾದಿಗಳು ಆರಂಭಗೊಂಡಿದ್ದು, 16ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಅಂಚೆ ಕಚೇರಿ ವತಿಯಿಂದ ಅಂಚೆ ಸೇವಾ ಸೌಲಭ್ಯಗಳ ವಿಶೇಷ ಮಳಿಗೆಯನ್ನು ತೆರೆಯಲಾಗಿದ್ದು, ಮಾರ್ಚ್ 14ರಿಂದ 16ರವರೆಗೆ ಇರಲಿದೆ. ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗ ಶ್ರೀನಿವಾಸ ರೆಸಿಡೆನ್ಸಿಯಲ್ಲಿ ಈ ಮಳಿಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಇರಲಿದೆ.
ಇಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಗಳು, ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು, ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಮೊಬೈಲ್ ಬ್ಯಾಂಕಿಂಗ್, ಸಮೂಹ ಅಪಘಾತ ವಿಮೆ ಕುರಿತ ಮಾಹಿತಿ, ಅಂಚೆ ಚೀಟಿ ಸಂಗ್ರಹ ಮತ್ತು ಮಾರಾಟ, ಸಿ.ಎಸ್.ಸಿ, ಸೇವೆ, 300 ರೂ ಪಾವತಿಸಿ ನಿಮ್ಮದೇ ಭಾವಚಿತ್ರದ 12 ಅಂಚೆ ಚೀಟಿ ಪಡೆಯುವ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.