ಕಂಬಳ ಕೋಣದ ಮಾಲಕರು, ಓಟಗಾರರು, ಉದ್ಘೋಷಕರು,ಕೋಣಗಳನ್ನು ಬಿಡಿಸುವವರು, ಕೋಣಗಳನ್ನು ಓಡಿಸಲು ಬೇಕಾದ ಇತರ ಪರಿಕರಗಳನ್ನು ತಯಾರಿಸುವವರು, ಕಂಬಳ ಕೂಟಗಳಲ್ಲಿ ಭಾಗವಹಿಸಿ ಛಾಯಾಗ್ರಹಣ ಮಾಡುವ ಛಾಯಾಗ್ರಾಹಕರು, ಹಾಗೂ ಕೆಲವೊಂದು ಕೋಣಗಳ ಪರಿಚಯ ಇರಲಿದೆ
ಸಿದ್ಧಕಟ್ಟೆ: ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಚೊಚ್ಚಲ ಕೃತಿಯಾದ ಕಂಬಳ ಲೋಕ ಭಾಗ-1 ನ್ನು ಸಿದ್ಧಕಟ್ಟೆ ಶ್ರೀ ಪದ್ಮಕ್ಲೀನಿಕ್‌ನ ಡಾ.ಪ್ರಭಾಚಂದ್ರ, ಪಿಡಿಒ ಗಣೇಶ್ ಶೆಟ್ಟಿ ಗೋಳಿದೊಟ್ಟು, ಶಿಕ್ಷಕರಾಗಿರುವ ರಾಜೇಶ್ ರಾವ್ ನೆಲ್ಯಾಡಿ ಹಾಗೂ ಪೊಡುಂಬ ಸರೋಜಿನಿ ಸಂಜೀವ ಶೆಟ್ಟಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.