ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತಿನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ವೀರಕಂಭ ಮಜಿ ಸರಕಾರಿ ಶಾಲೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫನತ್ಯಾಜ್ಯ ಫಟಕ ನಿರ್ಮಾಣ ವಾಗದ ಬಗ್ಗೆ ಹಾಗು ಫನತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡುವಂತೆ ಕೋರಿದರು. ಮಂಗಳಪದವು ಪ್ರದೇಶದಲ್ಲಿ ಅನಾಧಿಕೃತ ಕಟ್ಟಡ ತೆರವುಗೊಳಸಿದೇ ಇರುವ ಬಗ್ಗೆ, ವಿವಿಧ ಜಂಕ್ಷನ್ ಗಳಲ್ಲಿ ಅಳವಡಿಸಿದ ಸೋಲಾರ್ ದೀಪ ರಿಪೇರಿ ಮಾಡದಿರುವುದರ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು,
ಅರೋಗ್ಯ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ, ಕೃಷಿ, ಮೆಸ್ಕಾಂ,ತೋಟಗಾರಿಕೆ, ಶಿಕ್ಷಣ, ಕಂದಾಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಗ್ರಾ ಪಂ ಸದಸ್ಯರಾದ ರಘು ಪೂಜಾರಿ,ದಿನೇಶ್ ಪೂಜಾರಿ, ನಿಶಾಂತ್ ರೈ, ಸಂದೀಪ್, ಜಯಪ್ರಸಾದ್, ಅಬ್ದುಲ್ ರಹಿಮಾನ್, ಜಯಂತಿ, ಮೀನಾಕ್ಷಿ, ಗೀತಾ ಜೆ ಗಾಂಭೀರ್, ಉಮಾವತಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಎಂ ಸ್ವಾಗತಿಸಿದರು,. ಕಾರ್ಯದರ್ಶಿ ಸವಿತಾ ವಾರ್ಷಿಕ ವರದಿ ವಾಚಿಸಿದರು.