ಕಲ್ಲಡ್ಕ

ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಪ್ರತಿಷ್ಠಾ ವರ್ಧಂತ್ಯುತ್ಸವ

ಶ್ರೀ ರಾಮಚಂದ್ರಾಪುರ ಮಠದ ಕಲ್ಲಡ್ಕದ ಗೇರುಕಟ್ಟೆಯಲ್ಲಿರುವ ಶ್ರೀ ಉಮಾಶಿವ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶದ ಹನ್ನೊಂದನೇ ವರ್ಧಂತ್ಯುತ್ಸವ ಕಾರ್ಯಕ್ರಮ ಶ್ರೀ ಅಕ್ಷೇತ್ರದಲ್ಲಿ ನಡೆಯಿತು.

ಬೆಳಗ್ಗೆ ಪುಣ್ಯಾಹವಾಚನ, ಗಣಪತಿ ಹವನ, ನವಕ ಪ್ರತಿಷ್ಠೆ, ಶತರುದ್ರ ಜಪ, ನಾಗ ರಕ್ತೇಶ್ವರಿ ಗುಳಿಗ ತಂಬಿಲ, ಸಾಮೂಹಿಕ ಕುಂಕುಮಾರ್ಚನೆಗಳು ನಡೆದು, ನವಕ ಕಲಶಾಭಿಷೇಕ, ಶತರುದ್ರ ಕಲಶಾಭಿಷೇಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಬೆಳಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ  ಆಶೀರ್ವಚನ ನೀಡಿ ಸುಸಂಸ್ಕೃತ ಮನುಷ್ಯನಾಗಿ ಸಮಾಜದಲ್ಲಿ ಬಾಳ್ವೆ ನಡೆಸುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಹಿಂದೆ ನಿತ್ಯ ಅನ್ನದಾನ ನಡೆಯುತ್ತಿದ್ದ ಈ ಪುಣ್ಯ ಕ್ಷೇತ್ರದಲ್ಲಿಂದು ನಿತ್ಯವೂ ಭಕ್ತರು ಆಗಮಿಸುತ್ತಿದ್ದು, ಇದು ಅನ್ನದಾನಕ್ಕೆ ನೀಡುವ ಮಹತ್ವವಾಗಿದೆ ಎಂದು ಹೇಳಿದರು.

ಯುವ ಮುಖಂಡ ಕ್ಯಾ. ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದು ಜಗತ್ತು ಭಾರತವನ್ನು ನೋಡುವಂಥ ಸನ್ನಿವೇಶವಿದ್ದು, ಹಿಂದು ಧರ್ಮ ಜಾಗತಿಕ ಸವಾಲುಗಳಿಗೆ ಪರಿಹಾರವನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ. ಶ್ರೇಷ್ಠ ನಾಯಕತ್ವದಡಿ ನಾವೆಲ್ಲರೂ ಇದ್ದೇವೆ ಎಂದರು

ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ಕಲ್ಲಡ್ಕದ ಶ್ರೀ ರಾಮ ಮಂದಿರದಲ್ಲಿ ನಡೆಯುವ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.

ಈ ಚಿತ್ರವನ್ನು ಸೆರೆಹಿಡಿದವರು: ನಿರಂಜನ ಭಟ್, ಸೌಮ್ಯ ಸ್ಟುಡಿಯೋ ಮಾಣಿ

ಅಧ್ಯಕ್ಷತೆಯನ್ನು ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ವಹಿಸಿ, ಬ್ರಾಹ್ಮಣ್ಯವೆಂದರೆ ಕೇವಲ ಜಾತಿ ಸೂಚಕವಲ್ಲ, ಹಿಂದು ಸಮಾಜದ ಮಾರ್ಗಸೂಚಿಯಾಗಿ ಕೆಲಸ ಮಾಡುತ್ತಿದೆ. ಶ್ರದ್ಧಾಕೇಂದ್ರಗಳ ಉಳಿವಿಗೆ ಸಮಸ್ತರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ಹವ್ಯಕ ಮಂಡಲ ಮಂಗಳೂರು ಅಧ್ಯಕ್ಷ ಉದಯಶಂಕರ ನೀರ್ಪಾಜೆ ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಲ್ಲಡ್ಕ ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಗೌರವಾಧ್ಯಕ್ಷ ಸಿ.ವಿ,ಗೋಪಾಲಕೃಷ್ಣ, ಕಾರ್ಯದರ್ಶಿ ಪಿ.ಶ್ಯಾಮ ಭಟ್ ಸಹಿತ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಅಮೈ ಜನಾರ್ದನ ಭಟ್ ವಂದಿಸಿದರು. ಮುರಳಿ ಕುಕ್ಕಿಲ ಕಾರ್ಯಕ್ರಮ ನಿರ್ವಹಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts