ಆದರ್ಶಗಳನ್ನು ಇಟ್ಟುಕೊಂಡು ಮುಂದು ಹೋದರೆ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ. ಯಾವುದೋ ಸಿನಿಮಾ ಹಾಡುಗಳಿಗೆ ಮಕ್ಕಳು ರೀಲ್ಸ್ ಮಾಡುವ ಬದಲು ತ್ರಿಪದಿಗಳನ್ನು ಹೇಳುವ ರೀಲ್ಸ್ ಮಾಡಿದರೆ ಅದು ಪ್ರಯೋಜನಕಾರಿಯಾಗುತ್ತದೆ ಈ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಹೇಳಿದರು.
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲೂಕು ಕಚೇರಿ ಸಹಯೋಗದೊಂದಿಗೆ ಬಿ.ಸಿ.ರೋಡಿನ ಆಡಳಿತ ಸೌಧದದ ಸಭಾಂಗಣದಲ್ಲಿ ನಡೆದ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು ಉಪನ್ಯಾಸ ನೀಡಿ ಕವಿ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿಳಿಸುವ ಕಾರ್ಯವನ್ನು ಮಾಡಿದ್ದಾರೆ. ಅವರಿಂದ ಸಾವಿರಕ್ಕಿಂತಲೂ ಅಧಿಕ ತ್ರಿಪದಿಗಳು ರಚನೆಯಾಗಿದ್ದು ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ ಎಂದರು.
ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ರಾಜ್ಯ ಕುಲಾಲ ಕುಂಬಾರರ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಬಲ, ಯುವ ವೇದಿಕೆಯ ಅಧ್ಯಕ್ಷ ನಿತೀಶ್ ಪಲ್ಲಿಕಂಡ, ಯುವ ವೇದಿಕೆ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಶ್ರೀ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪುಷ್ಪಲತಾ ಪ್ರಮುಖರಾದ ಎಚ್ಕೆ ನಯನಾಡು, ದೇವಪ್ಪ ಕುಲಾಲ್ ಪಂಜಿಕಲ್ಲು, ಲಕ್ಷ್ಮಣ್ ಅಗ್ರಬೈಲು, ವಿಠಲ ಪಲ್ಲಿಕಂಡ, ಕೇಂದ್ರ ಸ್ಥಾನೀಯ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ದಿವಾಕರ ಮುಗುಳ್ಯ, ಕದಾಯ ನಿರೀಕ್ಷಕ ವಿಜಯ ಆರ್. ಜನಾರ್ದನ ಜೆ., ರಾಷ್ಟ್ರೀಯ ಹಬ್ಬಗಳ ಆಚರಣ ಸಮಿಯ ವಿಷಯ ನಿರ್ವಾಹಕ ವಿಷು ಕುಮಾರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.ಶ್ರೀಕಲಾ ಕಾರಂತ ವಂದಿಸಿದರು.