ಬಂಟ್ವಾಳ

ಬಂಟ್ವಾಳ ಆಡಳಿತ ಸೌಧದ ಮುಂಭಾಗ ಅಕ್ಷರ ದಾಸೋಹ ನೌಕರರ ಪ್ರತಿಭಟನೆ: ಬಿಸಿಯೂಟ ನೌಕರರಿಗೆ 6 ಸಾವಿರ ರೂ ತಿಂಗಳ ವೇತನ ಯಾವಾಗ ಜಾರಿ ಮಾಡುತ್ತೀರಿ?

ಬಂಟ್ವಾಳ: ಕಾರ್ಮಿಕ ಸಂಘಟನೆಗಳಿಂದ ದೇಶಾದ್ಯಂತ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದು ಇದರ ಭಾಗವಾಗಿ ಶುಕ್ರವಾರ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಅಕ್ಷರ ದಾಸೋಹ ನೌಕರರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ರಾಮಣ್ಣ ವಿಟ್ಲ, ಅಕ್ಷರ ದಾಸೋಸ ನೌಕರರ ಸಂಘದ ಅಧ್ಯಕ್ಷರಾದ ಜಯಶ್ರೀ ಆರ್.ಕೆ, ಕಾರ್ಯದರ್ಶಿ ವಾಣಿಶ್ರೀ , ಸಿಪಿಎಂಎಲ್ ಜಿಲ್ಲಾ ಸದಸ್ಯ ಸಜೇಶ್ ಕೊಡಂಗೆ, ಅಕ್ಷರ ದಾಸೋಹ ನೌಕರರಾದ ವಿನಯ ನಡುಮೊಗರು, ಲವೀನಾ ಲೂಯಿಸ್, ಮಮತಾ ಬಿಳಿಯೂರು, ಶಕುಂತಲಾ ಕಾಡುಮಠ, ಪ್ರೇಮಾ ವಿಟ್ಲ, ಅನಿ ಸುರಿಬೈಲು, ಸೇವಂತಿ ಪಲ್ಲಿಪ್ಪಾಡಿ, ರೇಖಾ ನೇರಳಕಟ್ಟೆ, ಪೂರ್ಣಿಮಾ ಕಾರ್ಲ, ಶಾಲಿನಿ, ಪುಷ್ಪಾವತಿ ಉಪಸ್ಥಿತರಿದ್ದರು. ಬೇಡಿಕೆಗಳು ಹೀಗಿವೆ.

  • ಆಹಾರ, ಆರೋಗ್ಯ, ಶಿಕ್ಷಣ ಮಕ್ಕಳ ಹಕ್ಕಾಗಬೇಕು.
  • ಕೇಂದ್ರ ಸರ್ಕಾರವು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಅನುದಾನ ನೀಡಬೇಕು.
  • ಕನಿಷ್ಟ ಕೂಲಿ ರೂ.31,೦೦೦ ಜಾರಿ ಆಗಬೇಕು.
  • ಚುನಾವಣಾ ಸಂದರ್ಭದಲ್ಲಿ ನೀಡಿದ ಆರನೇ ಗ್ಯಾರಂಟಿಯಾದ ಬಿಸಿಯೂಟ ನೌಕರರಿಗೆ 6,000 ರೂ.ವೇತನ ಮತ್ತು ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು.
  • ಪ್ರತಿ ತಿಂಗಳ 5ನೇ ತಾರೀಕಿನೊಳಗೆ ವೇತನ ನೀಡಬೇಕು.
  • ನಿವೃತ್ತಿ ಆದವರಿಗೆ ಮಾಸಿಕ ಪಿಂಚಣಿ ರೂ.10,೦೦೦ ಜಾರಿ ಮಾಡಬೇಕು.
  • ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.
  • 29 ಕಾರ್ಮಿಕ ಕಾನೂನುಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿರುವ ಕ್ರಮ ಹಿಂಪಡೆಯಬೇಕು.
  • 4ನೇ ಭಾರತೀಯ ಕಾರ್ಮಿಕ ಸಮ್ಮೇಳನ(ಐಎಲ್‌ಸಿ) ಶಿಫಾರಸ್ಸು ಜಾರಿ ಮಾಡಿ.
  • ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡಬಾರದು, ಈಗಾಗಲೇ ನಿವೃತ್ತಿ ಆದವರಿಗೆ ಇಡಿಗಂಟು ನೀಡಬೇಕು.
  • ಬಿಸಿಯೂಟ ಸಿಬ್ಬಂದಿಯ ಕೆಲಸದ ಅವಧಿ 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು.
  • ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ತರಬೇಕು.
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts