ಬಂಟ್ವಾಳ

ಇರಾ ಬಂಟರ ಭವನದಲ್ಲಿ ಫೆಬ್ರವರಿ 11ರಂದು ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮೇಳನ

ಫೆಬ್ರವರಿ 11ರಂದು ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆಯ ಪ್ರಾಂತ್ಯ 5ಕ್ಕೆ ಒಳಪಡುವ ಸದಸ್ಯರ ಸಮ್ಮಿಲನವಾದ ಸಂಧ್ಯಾ – ಪ್ರಾಂತೀಯ ಸಮ್ಮಿಲನ ಇರಾ ಬಂಟರ ಭವನದಲ್ಲಿ ನಡೆಯಲಿದೆ.

ಜಾಹೀರಾತು

ಈ ವಿಷಯವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಲಯನ್ಸ್ ಪ್ರಾಂತಿಯ ಸಮ್ಮಿಲನ ಸಮಿತಿಯ ಅಧ್ಯಕ್ಷ ದಾಮೋದರ ಬಿ.ಎಂ. ನೀಡಿದರು.

ಇರಾ ಬಂಟರ ಭವನದಲ್ಲಿ ಬಿ.ವಿ.ಕಾರಂತ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ನೋಂದಣಿ ಮತ್ತು ಉಪಾಹಾರ, 4.30ರಿಂದ 5.15ರವರೆಗೆ ಬ್ಯಾನರ್ ಪ್ರದರ್ಶನ, 5.30ರಿಂದ 8ರವರೆಗೆ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಕಲಾಪಗಳು, ಉದ್ಘಾಟನೆ, ಸೇವೆ, ಗೌರವ ಪ್ರಶಸ್ತಿ ಪುರಸ್ಕಾರ ಹಾಗೂ ಬಳಿಕ ಊಟೋಪಚಾರ ಸಹಿತ ನೃತ್ಯವೈವಿಧ್ಯ ನಡೆಯಲಿದೆ. ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ, ಎಕ್ಸ್ ಟ್ರೀಮ್ ಡ್ಯಾನ್ಸ್ ಕ್ರಿವ್ ಬಿ.ಸಿ.ರೋಡ್ ತಂಡ ಸಹಿತ ನಾಡಿನ ಪ್ರಖ್ಯಾತ ಸಾಂಸ್ಕೃತಿಕ ತಂಡಗಳು ಪ್ರದರ್ಶನ ನೀಡಲಿವೆ ಎಂದರು.

ಲಯನ್ಸ್ ಪ್ರಾಂತೀಯ ಸಮ್ಮೇಳನದ ಕುರಿತ ಪತ್ರಿಕಾಗೋಷ್ಠಿ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ನಡೆಯಿತು: ಚಿತ್ರ www.bantwalnews.com

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ವಹಿಸಲಿರುವರು. ಉದ್ಘಾಟನೆಯನ್ನು ಪ್ರಾಂತೀಯ ಪ್ರಥಮ ಮಹಿಳೆ ಸಂಧ್ಯಾ ರಮಾನಂದ ನೆರವೇರಿಸುವರು. ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು ಅಧ್ಯಾಪಕ ಮಹೇಶ್ ಕುಮಾರ್ ವಿ. ಕರ್ಕೇರ ಪ್ರಧಾನ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಗೌರವ ಪ್ರಶಸ್ತಿಯನ್ನು ಲಯನ್ಸ್ ನ ಐವರು ಸಾಧಕರಿಗೆ ನೀಡಿ ಗೌರವಿಸಲಾಗುವುದು. ಹೋಟೆಲ್ ಜನತಾ ಡೀಲಕ್ಸ್ ಮಂಗಳೂರಿನ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರಿಗೆ ಲಯನ್ಸ್ ಉದ್ಯಮಭೂಷಣ ಪ್ರಶಸ್ತಿ, ಸಿಂಗಾರಿ ಬೀಡಿ ವರ್ಕ್ಸ್ ಮಾಲೀಕ ಸುಲೈಮಾನ್ ಹಾಜಿ ಅವರಿಗೆ ಉದ್ಯಮ ಸೌರಭ ಪ್ರಶಸ್ತಿ, ಸಾಯಿಗಣೇಶ್ ಇಂಡೇನ್ ಗ್ಯಾಸ್ ಕಡಂಬು ಮಾಲೀಕ ಸತೀಶ್ ಕುಮಾರ್ ಆಳ್ವ ಅವರಿಗೆ ಉದ್ಯಮ ತಿಲಕ ಪ್ರಶಸ್ತಿ, ಬಜಾರ್ ಗ್ರೂಪ್ ಮಾರ್ನಬೈಲ್ ಆಡಳಿತ ನಿರ್ದೇಶಕ ಸುಧಾಕರ ಆಚಾರ್ಯ ಅವರಿಗೆ ಉದ್ಯಮರತ್ನ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು ಅವರಿಗೆ ಶಿಕ್ಷಣ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು. ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಮಾತನಾಡಿ, ಪ್ರಾಂತ್ಯದ ಬಂಟ್ವಾಳ, ಕೊಳ್ನಾಡು ಸಾಲೆತ್ತೂರು,  ಮಂಗಳಗಂಗೋತ್ರಿ, ಛೋಟಾಮಂಗಳೂರು, ಲೊರೆಟ್ಟೊ ಅಗ್ರಾರ್, ಮುಡಿಪು ಕುರ್ನಾಡು, ವಿಟ್ಲ ಸಿಟಿ, ವಾಮದಪದವು, ಪ್ರಕೃತಿ, ರಾಯಿ ಸಿದ್ಧಕಟ್ಟೆ, ಅಮ್ಟೂರು ಕ್ಲಬ್ ಗಳು ಗ್ರಾಮೀಣ ಭಾಗಗಳಲ್ಲಿ ಸೇವೆ ಮಾಡುತ್ತಿದ್ದು, ಪ್ರಾಂತ್ಯದ ಎಲ್ಲ ಬಂಧುಗಳು ಫೆ.11ರಂದು ಒಟ್ಟಾಗಿ ಸೇರಲಿದ್ದೇವೆ. ಸರಕಾರಿ ಶಾಲೆ, ನಮ್ಮ ಶಾಲೆ ಎಂಬ ಧ್ಯೇಯೋದ್ಧೇಶದೊಂದಿಗೆ ಅದರ ಉನ್ನತಿಗೆ ಸಹಕರಿಸುವ ಉತ್ತಮ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದವರು ಹೇಳಿದರು. ಕಾರ್ಯದರ್ಶಿ ಜಯಪ್ರಕಾಶ್ ರೈ ಮೇರಾವು, ಕೋಶಾಧಿಕಾರಿ ರಾಮಪ್ರಸಾದ್ ರೈ, ಸಮ್ಮೇಳನದ ಮಾಧ್ಯಮ ಸಂಯೋಜಕ ಬಾಲಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts