ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಾಮದಪದವು ಗಣೇಶ ಮಂದಿರದಲ್ಲಿ ಭಾನುವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ ಕಾರ್ಯಕ್ರಮ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಉಪನ್ಯಾಸ ನೀಡಿದರು.ಪೂಜಾ ಸಮಿತಿ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಸಂಸ್ಕಾರಯುಕ್ತ ಮತ್ತು ಸ್ವಾಭಿಮಾನಿ ಜೀವನ ನಡೆಸಲು ಯೋಜನೆ ಪ್ರೇರಣೆ ನೀಡುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ, ಯೋಜನಾಧಿಕಾರಿ ಮಾಧವ ಗೌಡ, ವಗ್ಗ ವಲಯಾಧ್ಯಕ್ಷ ಉಮೇಶ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಮತ್ತಿತರರು ಶುಭ ಹಾರೈಸಿದರು. ಪ್ರಮುಖರಾದ ನವೀನ್ ಚಂದ್ರ ಶೆಟ್ಟಿ, ಆನಂದ ಆಚಾರ್ಯ, ಪ್ರವೀಣ್ ಅಂತರ, ಶಾಮರಾಯ ಆಚಾರ್ಯ, ಕುಶಲ, ಗೋಪಾಲಕೃಷ್ಣ ಚೌಟ, ವಿಜಯ ರೈ ಆಲದಪದವು ಮತ್ತಿತರರು ಇದ್ದರು. ಮೇಲ್ವಿಚಾರಕಿ ಸವಿತಾ ಪ್ರಾಸ್ತಾವಿಕ ಮಾತನಾಡಿದರು. ಧ್ರುವಿ ಪಿ. ಕುಂದರ್ ಪ್ರಾರ್ಥನೆ ಹಾಡಿದರು. ಸಮಿತಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಮಾಧವ ವಂದಿಸಿದರು. ಗಣೇಶ್ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ವಗ್ಗ ಶ್ರೀ ಶಾರದಾಂಬ ಮಹಿಳಾ ಭಜನಾ ಮಂಡಳಿ, ಮಾವಿನಕಟ್ಟೆ ಚಾಮುಂಡೇಶ್ವರಿ ಭಜನಾ ಮಂಡಳಿ ಮತ್ತು ಅಂದ್ರಳಿಕೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ ವತಿಯಿಂದ ನೃತ್ಯ ಭಜನೆ ಪ್ರದರ್ಶನಗೊಂಡಿತು.