ನರಿಕೊಂಬುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಲಿದ್ದು, ಇದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 1.5 ಲಕ್ಷ ರೂ ಅನುದಾನದ ಮಂಜೂರಾತಿಪತ್ರವನ್ನು ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು.
ಬಂಟ್ವಾಳ ಯೋಜನಾ ಕಚೇರಿಯ ತುಂಬೆ ವಲಯಕ್ಕೆ ಒಳಪಡುವ ನರಿಕೊಂಬು ಶಾಲೆಯಲ್ಲಿ ನಿರ್ಮಾಣವಾಗುವ ನೂತನ ಕಟ್ಟಡಕ್ಕೆ ಅನುದಾನ ಮಂಜೂರಾತಿ ಪತ್ರ ಹಸ್ತಾಂತರ ಸಂದರ್ಭ ಯೋಜನೆಯ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ನರಿಕೊಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್, ಶಾಲಾ ಮುಖ್ಯ ಶಿಕ್ಷಕಿ ಪ್ರೇಮ, ಯೋಜನೆಯ ನರಿಕೊಂಬು ಬಿ ಒಕ್ಕೂಟ ಅಧ್ಯಕ್ಷ ಜಯಂತ, ನರಿಕೊಂಬು ಪಂಚಾಯತ್ ಸದಸ್ಯರಾದ ಚಿತ್ರಾವತಿ, ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ, ಒಕ್ಕೂಟ ಪದಾಧಿಕಾರಿಗಳಾದ ಲೀಲಾವತಿ, ಗುಲಾಬಿ, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.